Advertisement

ಮಕ್ಕಳ ಆಟಕ್ಕೊಂದು ಹೊಸ “ಆಲೋಚನೆ’

08:55 PM Dec 12, 2019 | mahesh |

ಪ್ರಸಂಗದ ಎರಡು ಮೂರು ಪಾತ್ರಗಳನ್ನು ಹೆಚ್ಚು ಪರಿಶ್ರಮ ಸಾಧಿಸಿದ, ರಂಗದಲ್ಲಿ ಅನುಭವವುಳ್ಳ “ಮಕ್ಕಳನ್ನು’ ಸೇರಿಸಿಕೊಂಡುದೇ ಮುಖ್ಯ ಕಾರಣವಾಗಿ ಪ್ರದರ್ಶನ ಜನ ಮೆಚ್ಚುಗೆ ಪಡೆಯುವಂತಾಯಿತು. ಈ ತಂತ್ರವು ಇಲ್ಲಿ ಫಲಕಾರಿಯಾಗಿದೆ .ಇಂತಹ ರಚನಾತ್ಮಕ ಆಲೋಚನೆ ಇಂದಿನ ಅಗತ್ಯ .

Advertisement

“ಸ್ನೇಹ ಜೀವಿ ಉಡುಪಿ’ ಕಲೆ , ಸಾಹಿತ್ಯ ,ಸಂಸ್ಕೃತಿ ಪ್ರೀತಿಯೊಂದಿಗೆ ಯಕ್ಷಗಾನ – ನಾಟಕ, ರಂಗಭೂಮಿಗಾಗಿ ಶ್ರಮಿಸುತ್ತಿರುವ ಹೊಸ ಹೊಸ ಆಲೋಚನೆಗಳ, ಅನುಷ್ಠಾನಾಸಕ್ತಿಯ , ನಿರಂತರ ಪ್ರಯೋಗನಿರತ ಸಂಘಟನೆ. ಆಸಕ್ತ ಮಕ್ಕಳನ್ನು ಕೆಲವು ಹಿರಿಯ ಹವ್ಯಾಸಿ ಕಲಾವಿದರನ್ನು ಜತೆಗೂಡಿಸಿ ನಾಟಕಗಳ ಯಶಸ್ವಿ ಪ್ರದರ್ಶನಗಳನ್ನು ನೀಡಿ ಇತ್ತೀಚೆಗೆ ಯಕ್ಷಗಾನ ರಂಗಕ್ಕೆ ಮಕ್ಕಳ ತಂಡದೊಂದಿಗೆ ಪ್ರವೇಶ ಸಾಧಿಸಿ ಎರಡು ಯಶಸ್ವಿ ಪ್ರಯೋಗಗಳ ಮೂಲಕ ಸೈ ಎನಿಸಿಕೊಂಡ “ಸ್ನೇಹಜೀವಿ’ ಮತ್ತೆ ನಿರಂತರ ತರಬೇತಿ ನಿರತವಾಗಿದೆ .

ಕೆಲವು ತಿಂಗಳ ನಾಟ್ಯಾಭ್ಯಾಸದ ಬಳಿಕ ಪ್ರದರ್ಶನಕ್ಕಾಗಿ ಆರಿಸಿಕೊಂಡ ಪ್ರಸಂಗ “ವೀರ ಅಭಿಮನ್ಯು’. ಮೊದಲ ಪ್ರಯತ್ನಕ್ಕೆ ಈ ಪ್ರಸಂಗ ಬೇಕಿತ್ತಾ… ಎಂಬ ಅನುಮಾನವೇನೋ ಇತ್ತು, ಆದರೆ ಪ್ರಥಮ ಪ್ರಯೋಗದ ಬಳಿಕ ಈ ಮಕ್ಕಳ ಗ್ರಹಣಶಕ್ತಿ ಹಾಗೂ ಉತ್ಸಾಹದ ಮುಂದೆ ಯಾವ ಪ್ರಸಂಗವನ್ನಾದರೂ ಇವರು ಶ್ರದ್ದೆ , ನಿರಂತರ ಅಭ್ಯಾಸದಿಂದ ಪ್ರದರ್ಶಿಸಬಲ್ಲರು ಎಂದು ಮನಗಾಣುವಂತಾಯಿತು . ಶಿಸ್ತಿನ ತರಬೇತಿಯೂ ಯಶಸ್ಸಿಗೆ ಕಾರಣ.

ಪ್ರದರ್ಶನದ ಯಶಸ್ಸಿಗೆ , ಒಟ್ಟು ಆಟ ಪ್ರಥಮ ಪ್ರದರ್ಶನದಂತಹ ಕುಂದುಕೊರತೆಗಳುಳ್ಳ ಮಕ್ಕಳ ಆಟವಾಗದೆ ಒಂದು ಸಮರ್ಥ ಪ್ರದರ್ಶನವಾಗಿತ್ತು . ಇದಕ್ಕೆ ಸಂಯೋಜಕರು, ನಿರ್ದೇಶಕರ ಒಂದು ಅನುಕರಣೀಯ ನಿರ್ಧಾರ ಕಾರಣ. ಅಂದರೆ ಪ್ರಸಂಗದ ಎರಡು ಮೂರು ಪಾತ್ರಗಳನ್ನು ಹೆಚ್ಚು ಪರಿಶ್ರಮ ಸಾಧಿಸಿದ, ರಂಗದಲ್ಲಿ ಅನುಭವವುಳ್ಳ “ಮಕ್ಕಳನ್ನು’ ಸೇರಿಸಿಕೊಂಡುದೇ ಮುಖ್ಯ ಕಾರಣವಾಗಿ ಪ್ರದರ್ಶನ ಜನ ಮೆಚ್ಚುಗೆ ಪಡೆಯುವಂತಾಯಿತು.

ಈ ತಂತ್ರವು ಇಲ್ಲಿ ಫಲಕಾರಿಯಾಗಿದೆ .ಇಂತಹ ರಚನಾತ್ಮಕ ಆಲೋಚನೆ ಇಂದಿನ ಅಗತ್ಯ . ಹೀಗೆ ಅನುಭವೀ ಮಕ್ಕಳೊಂದಿಗೆ ರಂಗದಲ್ಲಿ ಸಲೀಸಾಗಿ ನಿರ್ವಹಿಸುವ ಮೂಲಕ ಪ್ರಾರಂಭದ ಹಂತದಲ್ಲಿರುವ ಮಕ್ಕಳು ನಿರ್ಭಿಡೆಯಿಂದ ಅಳುಕುಗಳಿಲ್ಲದೆ ಕೆಲಸ ಮಾಡುವಂತಾಗಿ ಪ್ರಥಮ ಪ್ರದರ್ಶನವೇ ಯಶಸ್ವಿಯಾಗಿದೆ . ಇದು , ಕಲಿಯುವ ಮಕ್ಕಳ ಮೊದಲ ಪ್ರದರ್ಶನ ಎಂದನಿಸಲೇ ಇಲ್ಲ . ಪ್ರೇಕ್ಷಕರಿಗೆ
ಪ್ರದರ್ಶನದುದ್ದಕ್ಕೂ “ಬೋರ್‌’ ಅನ್ನಿಸಲೇ ಇಲ್ಲ . ಇದಕ್ಕೆ ಹೊಸ ಆಲೋಚನೆಯ ಸಂಯೋಜನೆ , ಒಂದರಡು ಅನುಭವಿ ಮಕ್ಕಳನ್ನು ಸೇರಿಸಿಕೊಂಡಾಗ ಮೊದಲು ಗೆಜ್ಜೆಕಟ್ಟಿದ ಮಕ್ಕಳೂ ರಂಗದಲ್ಲಿ ಸಹಕಲಾವಿದರ ಅನುಭವ ಪಡೆಯುತ್ತಾರೆ , ಹೇಳಿ ಕೊಡುವುದಕ್ಕೂ ಹೆಚ್ಚು ರಂಗದಲ್ಲೆ ಸಿದಟಛಿಗೊಳ್ಳುತ್ತಾರೆ, ಪ್ರದರ್ಶನ ಕಳೆಗಟ್ಟುತ್ತದೆ .ಇಂತಹ ಹೊಸ ಆಲೋಚನೆ ಒಂದು ಮಾದರಿಯಾಗಿ ಗುರುತಿಸಲ್ಪಟ್ಟಿದೆ .

Advertisement

ಯಕ್ಷಗಾನದ ಪೂರ್ವರಂಗದ ಪರಿಚಯ ಮಕ್ಕಳಿಗೆ ಆಗಿದೆ , ಇದು ಆಗ ಬೇಕಾದ್ದೆ . ಪ್ರತಿ ಪಾತ್ರಗಳನ್ನೂ ಉತ್ಸಾಹದಿಂದ ಮಾಡಿದ್ದಾರೆ. ಕೋಡಂಗಿ, ಬಾಲ ಗೋಪಾಲಕರು .ಮುಖ್ಯ ಸ್ತ್ರೀವೇಷದ ವಿಭಾಗದಲ್ಲಿ ನಾಲ್ಕು ಸ್ತ್ರೀ ವೇಷಗಳನ್ನು ಕುಣಿಸಿದ್ದಾರೆ . ನಾಟಕ ರಂಗ ಭೂಮಿಯ ತರಬೇತಿಯೂ ಈ ಮಕ್ಕಳಿಗೆ ಇದ್ದುದರಿಂದ ಸಹಜವಾದ ಆಭಿನಯ ,ಹೇಳಿಕೊಟ್ಟಿದ್ದುದರ ಪ್ರಸ್ತುತಿಯಾಗದೆ ಸಜಹವಾಗಿತ್ತು . ಪ್ರವೇಶ , ಏರು ಪದ ತೆಗೆದುಕೊಳ್ಳವ ಕ್ರಮ , ಅರ್ಜುನನ ಸಭಾಕ್ಲಾಸ್‌ ಮುಂತಾದ ರೀತಿಯಲ್ಲಿ ರಂಗಕ್ರಿಯೆಗಳಿಗೆ ಒತ್ತು ನೀಡಿದ್ದು ಪ್ರದರ್ಶನದುದ್ದಕೂ ಸ್ಪಷ್ಟವಾಗಿ ಪ್ರಸ್ತುತಿಗೊಂಡಿದೆ. ಎರಡನೇ ಪ್ರಯೋಗವು ಅಂಬಲಪಾಡಿಯಲ್ಲಿ ನಡೆಯಿತು.

ಭಾಗವತರು: ದಿನೇಶ ಭಟ್‌ ಯಲ್ಲಾಪುರ ,ಮದ್ದಳೆ -ಯಜ್ಞೆಶ್‌ ರೈ ಕಟೀಲು, ಚೆಂಡೆ- ಸವಿನಯ ನೆಲ್ಲಿತೀರ್ಥ, ಕಲಾವಿದರಾಗಿ: ಶಿವರಾಜ ಬಜೆಕೋಡ್ಲು, ಶ್ರಿನಿಧಿ ಆಚಾರ್ಯ, ಪೃಥ್ವೀಶ್‌ ಪರ್ಕಳ, ವಿದ್ಯಾರ್ಥಿ ಕಲಾವಿದರಾಗಿ-ಪ್ರತಿಮಾ, ಸಂಗೀತ , ವಿಶ್ರತಾ, ಸಂಧ್ಯಾ, ಪ್ರಜ್ಞಾ, ಶ್ರೀಶಾಂತ್‌, ಸಿಂಚನಾ, ಅನನ್ಯಾ, ಶಾಂತಿ , ಪ್ರಕಾಶ್‌, ಪ್ರಣೀತ್‌, ಲಕ್ಷ್ಮೀ, ಚೈತ್ರಾ ,ಲಿಲಿಯಾನ, ವಿಶತಾ, ನೇಪಥ್ಯ ಸಹಕಾರ – ಗಣೇಶ ತಂತ್ರಿ ಪಡುಬೆಳ್ಳೆ ಅವರದ್ದಾಗಿತ್ತು.

ಮುಚುಕುಂದ

Advertisement

Udayavani is now on Telegram. Click here to join our channel and stay updated with the latest news.

Next