Advertisement

ದುಬೈ ಹಿರಿಮೆಗೆ ಮತ್ತೂಂದು ಎತ್ತರದ ಗರಿ

08:15 AM Feb 13, 2018 | Team Udayavani |

ದುಬೈ: ಆಧುನಿಕತೆಯನ್ನು ಹಾದು ಹೊದ್ದು ಮಲಗಿರುವ ದುಬೈ ಜಗತ್ತೇ ನಿಬ್ಬೆರಗಾಗುವಂಥ ವಾಸ್ತು ವಿನ್ಯಾಸದ ಕಟ್ಟಡ ನಿರ್ಮಾಣದಲ್ಲಿ ಎತ್ತಿದ ಕೈ. ಈಗಾಗಲೇ ಬುರ್ಜ್‌ ಖಲೀಫಾದಂತಹ ಕಟ್ಟಡ ನಿರ್ಮಿಸಿದ ಹಿರಿಮೆ ಹೊಂದಿರುವ ದುಬೈ, ಇದೀಗ ವಿಶ್ವದ ಅತಿ ಎತ್ತರದ ಹೋಟೆಲೊಂದನ್ನೂ ನಿರ್ಮಿಸಿ ಮತ್ತೂಮ್ಮೆ ಜಗತ್ತಿನ ಗಮನ ಸೆಳೆದಿದೆ. ಸೋಮವಾರ ಇದರ ಉದ್ಘಾಟನೆ ನೆರ ವೇರಿದೆ. 

Advertisement

ಇದರ ಹೆಸರು “ದ ಜೆವೊರಾ ಹೋಟೆಲ್‌’. 1167.9 ಅಡಿ ಎತ್ತರದ ಈ ಕಟ್ಟಡದಲ್ಲಿ ಎಪ್ಪತ್ತೈದು ಅಂತಸ್ತುಗಳಿದ್ದು, ಒಟ್ಟು 528 ಐಶಾರಾಮಿ ಕೊಠಡಿ ಗಳಿವೆ. ಕಟ್ಟಡದ ಚಾವಣಿಯಲ್ಲಿ ಸ್ವಿಮ್ಮಿಂಗ್‌ ಪೂಲ್‌ ಜತೆಗೆ ಬಾರ್‌ ಸೌಲಭ್ಯ ವಿದೆ. ಈ ಹೋಟೆಲ್‌ನ ಪ್ರಮುಖ ಬಾಗಿಲುಗಳು, ಕಿಟಕಿಗಳ ಚೌಕಟ್ಟುಗ ಳಿಗೆ ಚಿನ್ನದ ಲೇಪನ ಮಾಡಲಾಗಿದ್ದು, ನೆಲ, ಚಾವಣಿ ಯ ಒಳ  ಭಾಗ ದಲ್ಲಿ ಚಿನ್ನದ ಲೇಪನದ ಕುಸುರಿ ಕೆಲಸದ ಚಿತ್ತಾರ ಮಾಡಲಾಗಿದೆ.  

ಈವರೆಗೆ ವಿಶ್ವದ ಅತಿ ಎತ್ತರದ ಹೋಟೆಲ್‌ ಇರುವಂಥ ಕೀರ್ತಿ ಇದ್ದಿದ್ದು ದುಬೈಗೇ. ಇಲ್ಲಿರುವ ಜೆಡಬ್ಲೂé ಮಾರಿಯಟ್‌ ಹೋಟೆಲ್‌ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರ ಎತ್ತರ 1164.7 ಅಡಿ. ಇದರ ಹತ್ತಿರದಲ್ಲೇ ನಿರ್ಮಾಣವಾಗಿರುವ ಜೆವೊರಾ ಹೋಟೆಲ್‌ ಇದೀಗ ಜೆ.ಡಬ್ಲೂ ಮಾರಿಯಟ್‌ ಹೋಟೆಲ್‌ನ ಪ್ರತಿಷ್ಠೆಯನ್ನು ಕಸಿದುಕೊಂಡಿದೆ. 

ಇದಲ್ಲದೆ, ವಿಶ್ವದ ಅತಿ ಎತ್ತರದ ನಿರ್ಮಾಣಗಳ ಪಟ್ಟಿಯಲ್ಲಿ ಇದೀಗ ಜೆವೊರಾ, 2ನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ದುಬೈನ ಬುರ್ಜ್‌ ಖಲೀಫಾ ವಿರಾಜಮಾನವಾಗಿದೆ.

1167.9 ಅಡಿ ಹೋಟೆಲ್‌ನ ಒಟ್ಟು ಎತ್ತರ
100 ಅಡಿ ಐಫೆಲ್‌ಗಿಂತ ಇದರ ಎತ್ತರ
75ಅಂತಸ್ತುಗಳ ಕಟ್ಟಡ
528 ಕೊಠಡಿಗಳ ಸಂಖ್ಯೆ
20000000: 2020ರ ವೇಳೆೆ ಭೇಟಿ ನೀಡುವವರ ನಿರೀಕ್ಷಿತ ಸಂಖ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next