Advertisement

ಕೋವಿಡ್ 19 ವೈರಸ್ ಸೋಂಕಿನ ಹೊಸ ಲಕ್ಷಣಗಳು ಪತ್ತೆ

02:41 AM Apr 02, 2020 | Hari Prasad |

ದಿನೇ ದಿನೆ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆಯೇ, ನನಗೂ ವೈರಸ್‌ ತಗುಲಿರಬಹುದು, ನನ್ನ ಸುತ್ತಮುತ್ತಲಿರುವವರೂ ಸೋಂಕಿತರೇ ಎಂಬಂಥ ಪ್ರಶ್ನೆಗಳು, ಗೊಂದಲಗಳು ಎಲ್ಲರನ್ನೂ ಕಾಡುತ್ತಿವೆ. ಈ ಆತಂಕಗಳ ನಡುವೆಯೇ ಸಂಶೋಧಕರು ಕೋವಿಡ್ 19 ವೈರಸ್ ಸೋಂಕಿಗೆ ಸಂಬಂಧಿಸಿದ ಇನ್ನಷ್ಟು ರೋಗಲಕ್ಷಣಗಳನ್ನು ಗುರುತಿಸಿದ್ದಾರೆ. ಹೊಸದಾಗಿ ಗುರುತಿಸಲಾದ 5 ಕೋವಿಡ್ 19 ವೈರಸ್ ಲಕ್ಷಣಗಳು ಇಂತಿವೆ

Advertisement

1. ನಾಲಗೆಗೆ ರುಚಿ ಹತ್ತದೇ ಇರುವುದು ಮತ್ತು ಮೂಗಿಗೆ ವಾಸನೆ ಅರಿಯದೇ ಇರುವುದು- ಈ ಲಕ್ಷಣವನ್ನು ಕ್ರಮವಾಗಿ ಅನಾಸ್ಮಿಯಾ ಮತ್ತು ಡಿಸ್ಗಾಸಿಯಾ ಎನ್ನುತ್ತಾರೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕಿತರಿಗೆ ಈ ಲಕ್ಷಣವೂ ಕಂಡುಬಂದಿರುವ ಕಾರಣ, ಇವುಗಳನ್ನು ಕೋವಿಡ್‌ ಸೋಂಕಿನ ಲಕ್ಷಣ ಎಂದು ಪರಿಗಣಿಸಲಾಗಿದೆ.

2. ಜೀರ್ಣಕ್ರಿಯೆ ಸಮಸ್ಯೆ- ಕೋವಿಡ್ 19 ವೈರಸ್ ರೋಗಿಗಳಲ್ಲಿ ಬೇಧಿ ಅಥವಾ ಅತಿಸಾರ ಸಮಸ್ಯೆಯೂ ಕಂಡುಬರುತ್ತದೆ. ಚೀನದ ವುಹಾನ್‌ ನಲ್ಲೂ ಅನೇಕ ಸೋಂಕಿತರಿಗೆ ಅತಿಸಾರ ಇದ್ದಿದ್ದು ಸಾಬೀತಾಗಿದೆ.

3. ಗುಲಾಬಿ ಕಣ್ಣು – ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದು ಕೂಡ ಕೋವಿಡ್ 19 ವೈರಸ್ ಸೋಂಕಿನ ಹೊಸ ಲಕ್ಷಣ. ಶೇ.1ರಿಂದ 3ರಷ್ಟು ರೋಗಿಗಳಲ್ಲಿ ಈ ಲಕ್ಷಣ ಗೋಚರಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

4. ಗೊಂದಲ ಮತ್ತು ಬಳಲಿಕೆ- ಕೋವಿಡ್ 19 ವೈರಸ್ ಸೋಂಕಿತರಲ್ಲಿ ಅತಿಯಾದ ಮಾನಸಿಕ ಗೊಂದಲಗಳು ಹಾಗೂ ತೀವ್ರ ಬಳಲಿಕೆಯೂ ಉಂಟಾಗುತ್ತದೆ. ಹಾಗಂತ ಈ ಸಮಸ್ಯೆ ಇದ್ದವರೆಲ್ಲ ಸೋಂಕಿತರಲ್ಲ. ಲಾಕ್‌ ಡೌನ್‌ ನಿಂದಾಗಿ ಮನೆಯಲ್ಲೇ ಕುಳಿತ ಅನೇಕರಲ್ಲೂ ಇಂಥ ಗೊಂದಲ, ಮಾನಸಿಕ ಒತ್ತಡ ಕಂಡುಬರುವುದು ಸಾಮಾನ್ಯ.

Advertisement

5. ತಲೆನೋವು- ಜ್ವರ, ಅಲರ್ಜಿ ಅಥವಾ ನೆಗಡಿ ಇದ್ದವರಿಗೆ ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ, ಕೋವಿಡ್ 19 ವೈರಸ್ ಸೋಂಕಿತರಲ್ಲೂ ಈ ಲಕ್ಷಣ ಕಂಡುಬಂದಿರುವ ಉದಾಹರಣೆಗಳು ಸಿಕ್ಕಿವೆ. ಸೋಂಕಿನ ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗುವ ಕಾರಣ, ಅಂದರೆ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವುದರಿಂದ ತಲೆನೋವು ಆರಂಭವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next