Advertisement

ಟಾಪ್‌ಗೇರ್‌; ಶುರುವಾಗಲಿದೆ ಎಸ್‌ಯುವಿ ಜಮಾನ

12:58 PM Jan 12, 2021 | Team Udayavani |

ಇಸವಿ 2020 ಕಷ್ಟಗಳ ಮಧ್ಯೆಯೇ ಕಳೆದುಹೋಗಿ, ಈಗಷ್ಟೇ 2021 ಶುರುವಾಗಿದೆ. ವರ್ಷಾಂತ್ಯದ ಕೆಲವು ತಿಂಗಳು ಬಿಟ್ಟರೆ, ಇಡೀ ವರ್ಷ ಆಟೋಮೊಬೈಲ್‌ ಕ್ಷೇತ್ರಕ್ಕೆ ಅಷ್ಟೇನೂ ಲಾಭ ತರಲಿಲ್ಲ. ಆದರೆ, 2020ರ ಅಂತ್ಯದ ನಾಲ್ಕು ತಿಂಗಳಲ್ಲಿ ಮಾತ್ರ ಆಟೋಮೊಬೈಲ್‌ ಕ್ಷೇತ್ರ ನಿರೀಕ್ಷೆಗೂ ಮೀರಿ ಚೇತರಿಸಿಕೊಂಡಿತು. ಇದೇ ಲಯ ಮುಂದುವರಿಯುವ ಧ್ಯೇಯದೊಂದಿಗೆ ಹೊಸ ಹೊಸ ಕಾರು, ಎಸ್‌ ಯುವಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಕಂಪನಿಗಳು ಸಿದ್ಧವಾಗಿವೆ.

Advertisement

1) ರಿನಾಲ್ಟ್ ಕಿಗಾರ್‌
ಫ್ರಾನ್ಸ್ ಮತ್ತು ಭಾರತದ ವಿನ್ಯಾಸಕರಿಂದ ಜಂಟಿಯಾಗಿ ರೂಪಿಸಲ್ಪಟ್ಟಿರುವ ಈ ಎಸ್‌ ಯುವಿ ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶಿಸಲಿದೆ. ಮ್ಯಾಗ್ನೈಟ್‌ ಮತ್ತು ಟ್ರೈಬರ್‌ ಕಾರಿನಂತೆಯೇ ಸಿಎಂಎಫ್‌ -ಎ+ ಪ್ಲಾಟ್‌ ಫಾರ್ಮ್ನಲ್ಲಿ ಇದನ್ನು ರೂಪಿಸಲಾಗಿದೆ. ಈ ವರ್ಷದ ಆರಂಭದಲ್ಲಿಯೇ ಇದು ಲಾಂಚ್‌ ಆಗಬಹುದು ಎಂದು ನಿರೀಕ್ಷಿಸಲಾಗಿದ್ದು, ಬೆಲೆ 5 ಲಕ್ಷ ರೂ.ಗಳಿಂದ ಆರಂಭವಾಗಲಿದೆ.

2)ಟಾಟಾ ಎಚ್ ಬಿಎಕ್ಸ್
ಸದ್ಯ ಟಾಟಾ ಕಾರುಗಳಿಗೆ ಡಿಮ್ಯಾಂಡ್‌ ಜಾಸ್ತಿಯಾಗಿದೆ. ಇದೇ ಬೇಡಿಕೆ ಉಳಿಸಿಕೊಳ್ಳುವ ತವಕ ಕಂಪನಿಯದ್ದು. ಹೀಗಾಗಿ, ಸದ್ಯದಲ್ಲೇ ತನ್ನ ಹೊಸ ಪುಟ್ಟ ಎಸ್
ಯುವಿ ಟಾಟಾ ಎಚ್‌ ಬಿ ಎಎಕ್ಸ್ ಅನ್ನು ಲಾಂಚ್‌ ಮಾಡಲಿದೆ. ಇದು ಟಾಟಾ ನಿಕ್ಸೋನ್ ‌ನ ಕೆಳಗಿನ ಹಂತದಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ. ಇದು 1.2 ಲೀ. ಸಾಮರ್ಥ್ಯದ ಎಂಜಿನ್‌ ಹೊಂದಿರಲಿದೆ ಎಂಬ ಮಾತುಗಳಿವೆ. ಇದರ ಬೆಲೆ 5 ಲಕ್ಷದಿಂದ ಆರಂಭಗೊಳ್ಳಲಿದೆ.

3) ಎಂಜಿ ಝಡ್‌ಎಸ್‌
ಈಗಾಗಲೇ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿತವಾಗಿರುವ ಈ ಕಾರು ಈ ವರ್ಷದ ಮಧ್ಯಂತರದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಇದು ಮೂರು 1.5 ಲೀ., 1 ಲೀ. ಮತ್ತು 1.3 ಲೀ. ಸಾಮರ್ಥ್ಯದ ಎಂಜಿನ್‌ಗಳಲ್ಲಿ ಬರಲಿದೆ. ಇದು ಹುಂಡೈ ಕ್ರೀಟಾ ಮತ್ತು ಕಿಯಾ ಸೆಲ್ಟೋಸ್‌ ಗೆ ಸ್ಪರ್ಧೆ ನೀಡುವ ಸಾಧ್ಯತೆಗಳಿವೆ. ಈ ಕಾರಿನ ದರ 9 ಲಕ್ಷದಿಂದ ಆರಂಭವಾಗಲಿದೆ.

ಇದನ್ನೂ ಓದಿ: ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಡೋಸ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

Advertisement

4 )ವಿಡಬ್‌ಲ್ಯೂ ಟೈಗನ್‌
ಫೋಕ್ಸ್ ವೋಗನ್‌ ಕಂಪನಿಯ ಈ ಕಾರು 2021ರ ಮಧ್ಯಂತರದಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳಿವೆ. 1.5 ಲೀ. ಪೆಟ್ರೋಲ್‌ ಎಂಜಿನ್‌ ಸಾಮರ್ಥ್ಯದ ಈ ಎಸ್‌ ಯುವಿ 7 ಸ್ಪೀಡ್‌ ಡಿಎಸ್ಜಿ ತಂತ್ರಜ್ಞಾನ ಹೊಂದಿದೆ. ಜತೆಗೆ 1 ಲೀ. ಪೆಟ್ರೋಲ್‌ ಎಂಜಿನ್‌ ಸಾಮರ್ಥ್ಯಯದ ಪುಟ್ಟ ಎಸ್‌ ಯುವಿ ಸಿಗಲಿದೆ. ಇದರ ಬೆಲೆ 10 ಲಕ್ಷದಿಂದ ಆರಂಭವಾಗಲಿದೆ.

5) ಟಾಟಾ ಗ್ರಾವಿಟಾಸ್‌
ಟಾಟಾ ಸಫಾರಿ ಎಂಬ ಹೆಸರಿನಲ್ಲಿ ಈ ಕಾರು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಕಂಪನಿ ತನ್ನ ಹಳೆಯ ಬ್ರಾಂಡ್‌ ಸಫಾರಿಯನ್ನೇ ಉಳಿಸಿಕೊಳ್ಳಲು ತೀರ್ಮಾನಿಸಿದಂತಿದೆ. ಈ ತಿಂಗಳೇ ಕಾರು ಮಾರುಕಟ್ಟೆಗೆ ಬರಲಿದೆ. ಕಾರಿನ ದರ 15 ಲಕ್ಷದಿಂದ ಆರಂಭವಾಗುವ ಸಾಧ್ಯತೆಗಳಿವೆ.

6) ಹುಂಡೈ ಕ್ರೀಟಾ 7 ಸೀಟರ್‌
ಸದ್ಯ ದೇಶದಲ್ಲಿ ಅತಿ ದೊಡ್ಡ ಎಸ್‌ ಯುವಿ ಎಂದೇ ಖ್ಯಾತಿ ಗಳಿಸಿಕೊಂಡಿರುವ ಇದು, 7 ಸೀಟರ್‌ ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಆದರೆ, ಇದಕ್ಕಾಗಿ ಈ
ವರ್ಷಾಂತ್ಯದವರೆಗೆ ಕಾಯಬೇಕು. ಇದಕ್ಕೆ ಅಲ್ಕಾಝಾರ್‌ ಎಂಬ ಹೊಸ ಹೆಸರು ನೀಡುವ ಸಾಧ್ಯತೆ ಇದೆ. ಇದು ಮೂರು ಸಾಮರ್ಥ್ಯ ದ ಎಂಜಿನ್‌ ಒಳಗೊಂಡಿರಲಿದೆ. ಇದರ ದರ 11 ಲಕ್ಷದಿಂದ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next