Advertisement

‘ಓಲ್ಡ್‌ ಮಾಂಕ್‌’ ನ್ಯೂ ಕಮಾಲ್‌: ಪ್ರಮೋಶನ್‌ ನಲ್ಲಿ ಚಿತ್ರ ತಂಡ ಬಿಝಿ

12:22 PM Feb 04, 2022 | Team Udayavani |

ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸಲು ಚಿತ್ರತಂಡಗಳು ಹತ್ತಾರು ರೀತಿಯಲ್ಲಿ ಪ್ಲಾನಿಂಗ್‌ ಮಾಡಿಕೊಳ್ಳುತ್ತವೆ. ಹೀಗೆ ಮಾಡಿಕೊಂಡ ಪ್ಲಾನ್‌ಗಳಲ್ಲಿ ಕೆಲವು ಮಾತ್ರ ವರ್ಕೌಟ್‌ ಆಗಿ, ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗುತ್ತವೆ. ಸಿನಿಮಾಕ್ಕೂ ಸಾಕಷ್ಟು ಪಬ್ಲಿಸಿಟಿ ತಂದುಕೊಡುತ್ತದೆ.

Advertisement

ಇತ್ತೀಚೆಗೆ ಹೀಗೆ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ “ಓಲ್ಡ್‌ ಮಾಂಕ್‌’. ಹೌದು, ಶ್ರೀನಿ ಮತ್ತು ಅದಿತಿ ಪ್ರಭುದೇವ ಅಭಿನಯದ “ಓಲ್ಡ್‌ ಮಾಂಕ್‌’ ಚಿತ್ರ ಇದೇ ಫೆ. 25ಕ್ಕೆ ತೆರೆಗೆ ಬರುತ್ತಿದೆ.

ಆರಂಭದಿಂದಲೂ ಹೊಸಥರದಲ್ಲಿ ತಮ್ಮ ಸಿನಿಮಾವನ್ನು ಮತ್ತು ಅದರ ಕಂಟೆಂಟ್‌ ಅನ್ನು ಪ್ರಚಾರ ಮಾಡುತ್ತಿರುವ “ಓಲ್ಡ್‌ ಮಾಂಕ್‌’ ಚಿತ್ರತಂಡ, ಈಗ ತನ್ನ ಇಂಥ ಪಬ್ಲಿಸಿಟಿಯಿಂದಲೇ ಸಾಕಷ್ಟು ಗಮನ ಸೆಳೆಯುತ್ತಿದೆ. ಯೂಟ್ಯೂಬ್‌ನಲ್ಲಿ ಟೀಸರ್‌ ಮೂಲಕ ಗಮನ ಸೆಳೆದ “ಓಲ್ಡ್‌ ಮಾಂಕ್‌’, ಮಾಲ್‌ಗ‌ಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಅನಾಗ್ಲಾಫ್ ತ್ರಿಡಿ ಸ್ಟಾಂಡಿ ಪೋಸ್ಟರ್‌ ಮೂಲಕ ಗಮನ ಸೆಳೆಯುತ್ತಿದೆ.

ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಲಿವುಡ್‌ನ‌ “ಅವೆಂಜರ್‌’ ಮಾದರಿ ಪೋಸ್ಟರ್‌, ಏರೋಪ್ಲೇನ್‌ ಪೋಸ್ಟರ್‌ ಮಾಡೆಲ್‌ ಪಬ್ಲಿಸಿಟಿ ಹೀಗೆ. ಹತ್ತಾರು ಕ್ರಿಯೇಟಿವ್‌ ಪ್ರಮೋಶನ್ಸ್‌ ಮೂಲಕ ನೆಟ್ಟಿಗರಿಗೆ ಇಷ್ಟವಾಗುತ್ತಿದೆ. ಈ ಎಲ್ಲ ಪ್ರಯತ್ನಗಳೂ “ಓಲ್ಡ್‌ ಮಾಂಕ್‌’ ಮೇಲೆ ನಿರೀಕ್ಷೆ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ನೂರರ ನಿರೀಕ್ಷೆಯಲ್ಲಿ ಚಿತ್ರರಂಗ: ತೆರೆಮರೆಯಲ್ಲಿ ಬಿಡುಗಡೆ ತಯಾರಿ ಜೋರು

Advertisement

ಇನ್ನು ತಮ್ಮ “ಓಲ್ಡ್‌ ಮಾಂಕ್‌’ ಸಿನಿಮಾದ ಹೊಸಥರದ ಪ್ರಮೋಶನ್ಸ್‌ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ದೇಶಕ ಶ್ರೀನಿ, “ಇವತ್ತು ಸಿನಿಮಾ ಮಾಡೋದು ಸುಲಭ ಆದ್ರೆ ಆ ಸಿನಿಮಾವನ್ನು ಆಡಿಯನ್ಸ್‌ಗೆ ತಲುಪಿಸೋದು ತುಂಬ ಕಷ್ಟ. ಅದಕ್ಕಾಗಿ ಹೊಸ ಹೊಸ ವಿಧಾನಗಳನ್ನ, ದಾರಿಗಳನ್ನು ಕಂಡು ಕೊಳ್ಳಬೇಕಾಗುತ್ತದೆ. ಪರಿಸ್ಥಿತಿಗೆ ತಕ್ಕಂತೆ ನಮ್ಮ ಪ್ರಮೋಶನ್ಸ್‌ ಪ್ಲಾನಿಂಗ್‌ ಕೂಡ ಬದಲು ಮಾಡಿ ಕೊಳ್ಳ ಬೇಕಾಗುತ್ತದೆ. ಹೊಸ ಥರದಲ್ಲಿ ನಮ್ಮ ಸಿನಿಮಾ ಪ್ರಮೋಶನ್ಸ್‌ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ, ಒಂದಷ್ಟು ಕ್ರಿಯೇಟಿವ್‌ ಐಡಿಯಾಗಳು ಹೊಳೆದವು. ಅದನ್ನೇ ಬಳಸಿ ಈಗಾಗಲೇ ಒಂದಷ್ಟು ಪ್ರಮೋಶನ್ಸ್‌ ಮಾಡಿದ್ದೇವೆ. ಅದಕ್ಕೆ ಆಡಿಯನ್ಸ್‌ ಮತ್ತು ಸಿನಿಮಾ ಇಂಡಸ್ಟ್ರಿ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಹೀಗೆ ಇನ್ನಷ್ಟು ಕ್ರಿಯೇಟಿವ್‌ ಆಗಿ ಸಿನಿಮಾದ ಕಂಟೆಂಟ್‌ ಇಟ್ಟುಕೊಂಡು ಹೊಸಥರದ ಪ್ರಮೋಶನ್ಸ್‌ ಮೂಲಕ ಆಡಿಯನ್ಸ್‌ಗೆ “ಓಲ್ಡ್‌ ಮಾಂಕ್‌’ ತಲುಪಿಸುವ ಕೆಲಸ ಮಾಡಲಿದ್ದೇವೆ’ ಎನ್ನುತ್ತಾರೆ.

ಅಂದಹಾಗೆ, “ಓಲ್ಡ್‌ ಮಾಂಕ್‌’ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next