Advertisement
ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳುವ ಮೂಲಕ ಮತದಾರರ ವಿಶ್ವಾಸ ಗಳಿಸುವತ್ತಲೂ ಸ್ಪ ರ್ಧಿಗಳು ಚಿಂತನೆ ನಡೆಸಿದ್ದಾರೆ. ದೂರದ ಊರುಗಳಲ್ಲಿರುವ ಬಂಧುಗಳು, ನೆರೆ ಹೊರೆಯವರನ್ನು ಸೆಳೆದು ಮತನೀಡುವಂತೆ ವಿನಂತಿಸಿಕೊಳ್ಳುವ ಉಮೇದಿನಲ್ಲಿ ಜಾಲತಾಣದಲ್ಲೇ ಸಕ್ರಿಯರಾಗಿದ್ದಾರೆ ಅಭ್ಯರ್ಥಿಗಳು.ಈಗ ಎಲ್ಲರ ಬಳಿಯೂ ಸ್ಮಾರ್ಟ್ ಮೊಬೈಲ್‌ಗಳಿವೆ.ಪ್ರತಿ ಕ್ಷಣವೂ ಜನರು ಮೊಬೈಲ್ ಸಂದೇಶಗಳಿಗೆ ಅಪ್‌ಡೇಟ್ ಆಗುತ್ತಾರೆ. ಈ ತಂತ್ರವನ್ನು ಗೆಳೆಯನಂತೆ ಮಾಡಿಕೊಂಡ ಅಭ್ಯರ್ಥಿಗಳು ಮತ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದು, ಜನಮನ ಗೆಲ್ಲುವ ಆಪ್ತ ಬರಹಗಳು ಗಮನ ಸೆಳೆಯುತ್ತಿವೆ.
Related Articles
Advertisement
ಕಡಿಮೆ ಅವಧಿಯಲ್ಲಿ ಮತದಾರರನ್ನು ಮುಟ್ಟಲು ಫೇಸ್‌ಬುಕ್ ನೆರವಾಗಿದೆ. ಕರಪತ್ರ ಮುದ್ರಿಸಿ ನೀಡಿದರೂ, ಜೊತೆಯಲ್ಲಿ ಇಟ್ಟುಕೊಳ್ಳುವ ನಂಬಿಕೆಇಲ್ಲ. ಆದರೆ, ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ಸಂದೇಶ ಗಳನ್ನು ಮತದಾರರಿಗೆ ಸುಲಭವಾಗಿ ಮುಟ್ಟಿಸಬಹುದು. ಮುದ್ರಿಸಿ ಹಂಚುವ ವೆಚ್ಚ ಹಾಗೂ ಸಮಯವೂ ಉಳಿಯುತ್ತದೆ ಎಂದು ರಾಂಪುರ ಪಿಎ ಗ್ರಾಪಂ ವಾರ್ಡ್ ನಂ.1ರ ಅಭ್ಯರ್ಥಿ ಮಲ್ಲಮ್ಮ ಹನುಮಂತ ಹೂಗಾರ ಹೇಳುತ್ತಾರೆ.ಉದ್ಯೋಗಕ್ಕಾಗಿ ಊರು ಬಿಟ್ಟು ತೆರಳಿರುವ ಮತದಾರರನ್ನು ಪೋನ್ ಮೂಲಕ ಸಂಪರ್ಕಿಸಿ, ನನ್ನಪರವಾಗಿ ಮತದಾನ ಮಾಡುವಂತೆ ವಿನಂತಿಸಿದ್ದೇನೆ. ಅವರಿಗೆ ನನ್ನ ಆಯ್ಕೆಯ ಚಿಹ್ನೆ, ಕ್ರಮ ಸಂಖ್ಯೆ ಮತ್ತು ಮತಗಟ್ಟೆ ಸಂಖ್ಯೆಯನ್ನು ವ್ಯಾಟ್ಸ್‌ಆ್ಯಪ್ ಮೂಲಕ ತಿಳಿಸಿದ್ದೇನೆ. ಆತ್ಮೀಯರು ನನ್ನ ಪರವಾಗಿ ಮತ ಚಲಾಯಿಸುವ ನಂಬಿಕೆ ಇದೆ. ಸಾಮಾಜಿಕ ಜಾಲತಾಣದಿಂದ ಸುಲಭ ಪ್ರಚಾರ ಸಾಧ್ಯವಾಗಿಸಿದೆ. ವಿವಿಧ ಕಾರಣಗಳಿಂದ ದೂರ ಇದ್ದವರನ್ನು ಹತ್ತಿರಕ್ಕೆಕರೆ ತಂದು ವಿಶ್ವಾಸ ಹೆಚ್ಚಿಸಿದೆ ಎನ್ನುತ್ತಾರೆ ಬೊಮ್ಮನಹಳ್ಳಿ ಗ್ರಾಪಂ ಗುಂದಗಿಯ ವಾರ್ಡ್ ನಂ. 4ರ ಅಭ್ಯರ್ಥಿ ಉಮಾಬಾಯಿ ರಾವುತಪ್ಪ ಬಿರಾದರ.
-ರಮೇಶ ಪೂಜಾರ