ನವದೆಹಲಿ: ದೇಶದಲ್ಲಿ ಬ್ರಿಟನ್ ರೂಪಾಂತರಿತ ಕೋವಿಡ್ ಭೀತಿ ಹೆಚ್ಚಿಸಿದ್ದು, ಒಟ್ಟಾರೆ 38 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ವರದಿಗಳ ಪ್ರಕಾರ ಬೆಂಗಳೂರಿನಲ್ಲಿ 10 ಪ್ರಕರಣ, ಹೈದರಾಬಾದ್ ನಲ್ಲಿ 3, ಪುಣೆಯಲ್ಲಿ 5, ದೆಹಲಿಯಲ್ಲಿ 19, ಕೊಲ್ಕತ್ತಾದಲ್ಲಿ 1 ಬ್ರಿಟನ್ ರೂಪಾಂತರಿತ ಕೋವಿಡ್ ಸೋಂಕಿತರು ಕಂಡುಬಂದಿದ್ದಾರೆ.
ಇದೀಗ ಸೋಂಕಿತರೆಲ್ಲರನ್ನೂ ಸಿಂಗಲ್ ರೂಂ ಐಶೋಲೇಶನ್ ಗೆ ಒಳಪಡಿಸಲಾಗಿದ್ದು, ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮಾತ್ರವಲ್ಲದೆ ವೈರಸ್ ಹರಡುವುದನ್ನು ತಡೆಗಟ್ಟಲು ಆಯಾ ರಾಜ್ಯ ಸರ್ಕಾರಗಳಿಂದ ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯಗಳು ಕೂಡ ನಡೆಯುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಗೇಮಿಂಗ್ ಪ್ರಿಯರಿಗೆ ಸಂತಸದ ಸುದ್ದಿ: FAU-G ಗೇಮ್ ಬಿಡುಗಡೆ ದಿನಾಂಕ ಪ್ರಕಟ
ಬ್ರಿಟನ್ ರೂಪಾಂತರಿತ ಕೋವಿಡ್ ಸೋಂಕು, ಡೆನ್ಮಾರ್ಕ್, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಜ್ಜರ್ ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್, ಸಿಂಗಪೂರ್ ನಲ್ಲೂ ಕಂಡುಬಂದಿದೆ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರ ನವೆಂಬರ್ 25 ರಿಂದ ಡಿಸೆಂಬರ್ 23 ರವರೆಗೂ ಸುಮಾರು 33,000 ಪ್ರಯಾಣಿಕರು ಬ್ರಿಟನ್ ನಿಂದ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮದುವೆ ಮನೆಯಿಂದ ವರ ಪರಾರಿ ; ಕಂಡಕ್ಟರ್ ಕೈ ಹಿಡಿದ ಯುವತಿ.!