ಬೆಂಗಳೂರು: ರಾಷ್ಟ್ರಾದ್ಯಂತ ವ್ಯಾಪಿಸುತ್ತಿರುವ ಮಹಾಮಾರಿ ಕೋವಿಡ್ 19 ವೈರಸ್ ಕರ್ನಾಟಕದಲ್ಲೂ ವೇಗವಾಗಿ ಹಬ್ಬುತ್ತಿದೆ. ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ ಏಳು ಹೊಸ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆಕಾರಣವಾಗಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕುಪೀಡಿತರು ಬೆಂಗಳೂರು ನಗರದಲ್ಲಿದ್ದಾರೆ, ಇಲ್ಲಿ 41 ಜನರಲ್ಲಿ ಈ ಸೋಂಕು ಪಾಸಿಟಿವ್ ಪತ್ತೆಯಾಗಿದೆ. ಇವರಲ್ಲಿ 5 ಜನರು ಗುಣಮುಖರಾಗಿದ್ದಾರೆ ಮತ್ತು ಓರ್ವ ಸೋಂಕಿತ ಮೃತಪಟ್ಟಿದ್ದಾರೆ.
ಬೆಂಗಳೂರು ಹೊರತುಪಡಿಸಿದರೆ ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಲಾ 8 ಕೋವಿಡ್ 19 ಸೋಂಕು ಪೀಡಿತರಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಲ್ಲಿ ತಲಾ 7 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಇನ್ನುಳಿದಂತೆ ಕಲ್ಬುರ್ಗಿ, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ ತಲಾ 3 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಕಲ್ಬುರ್ಗಿಯಲ್ಲಿ ಈ ಸೋಂಕಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ.
ಕೊಡಗು, ಧಾರವಾಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ತುಮಕೂರಿನ ಕೋವಿಡ್ ಸೋಂಕಿತ ರೋಗಿ ಸಾವನ್ನಪ್ಪಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಇಲ್ಲಿಯವರೆಗೆ 83 ಕೋವಿಡ್ 19 ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಮತ್ತು ಒಟ್ಟಾರೆಯಾಗಿ ಇಲ್ಲಿಯವರೆಗೆ 3 ಸಾವುಗಳು ಸಂಭವಿಸಿದೆ.