Advertisement

ಜೀ ಕನ್ನಡದಲ್ಲಿ ಗಟ್ಟಿಮೇಳ

10:04 AM Mar 07, 2019 | |

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಎಲ್ಲಾ ಬಗೆಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ವೀಕ್ಷಕರು ಕೂಡ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಬಗೆಯ ಧಾರಾವಾಹಿಗಳನ್ನು ಮೆಚ್ಚಿಕೊಂಡಿದ್ದಾರೆ. ಈಗ ಮತ್ತೂಂದು ಹೊಸ ಲವ್‌ಸ್ಟೋರಿ ಜೊತೆಗೆ ಬಡವ ಹಾಗು ಶ್ರೀಮಂತರ ಮಧ್ಯೆ ನಡೆಯುವಂತಹ ಸಂಘರ್ಷಗಳ ಎಳೆ ಇಟ್ಟುಕೊಂಡು “ಗಟ್ಟಿಮೇಳ’ ಹೆಸರಿನ ಧಾರಾವಾಹಿ ಶುರುವಾಗುತ್ತಿದೆ. ಮಾರ್ಚ್‌ 11 ರಂದು ಶುರುವಾಗಲಿರುವ ಈ “ಗಟ್ಟಿಮೇಳ’, ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Advertisement

ಈ ಧಾರಾವಾಹಿಯಲ್ಲಿ ಸ್ತ್ರೀ ಸಬಲೀಕರಣದ ಸುತ್ತ ಹೆಣೆದ ವಿಷಯಗಳೇ ಹೈಲೈಟ್‌. ಇಲ್ಲೊಂದು ನವಿರಾದ ಪ್ರೇಮಕಥೆಯೂ ಇದೆ. ಹೆಣ್ಣು ಮಕ್ಕಳನ್ನು ಪಡೆಯುವುದೇ ಮಹಾಪಾಪ ಎನ್ನುವಂತಹ ಈಗಿನ ಕಾಲದಲ್ಲಿ ಈ ಧಾರಾವಾಹಿಯ ಕಥಾ ನಾಯಕಿಯಾದ ಪರಿಮಳ ತನ್ನ ನಾಲ್ಕು ಜನ ಹೆಣ್ಣು ಮಕ್ಕಳನ್ನು ಹೇಗೆ ಪ್ರೀತಿಯಿಂದ ಬೆಳೆಸುತ್ತಾಳೆ, ಸಣ್ಣ ಮಟ್ಟದಲ್ಲಿ ಕೇಟರಿಂಗ್‌ ಮಾಡಿಕೊಂಡು ಜೀವನಸಾಗಿಸುತ್ತಾ ಮಕ್ಕಳನ್ನು ನೋಡಿಕೊಳ್ಳುವ ದಿಟ್ಟ ಹಾಗೂ ಗಟ್ಟಿಗಿತ್ತಿ ಹೆಣ್ಣಾಗಿ ಹೇಗೆ ಮಾದರಿಯಾಗುತ್ತಾಳೆ ಮತ್ತು ಅವಳ ನಾಲ್ವರು ಹೆಣ್ಣು ಮಕ್ಕಳಾದ ಆರತಿ, ಅಮೂಲ್ಯ, ಅದಿತಿ ಹಾಗೂ ಅಂಜಲಿ ಇವರೆಲ್ಲರೂ ಒಬ್ಬರಿಗಿಂತ ಒಬ್ಬರು ವಿಭಿನ್ನ. ಆದರೂ ತನ್ನ ಅಮ್ಮನನ್ನು ಇನ್ನಿಲ್ಲದಂತೆ ಪ್ರೀತಿಸುವ ಮಕ್ಕಳು. ಈ ಹೆಣ್ಣು ಮಕ್ಕಳಿಗಾಗಿ ತನ್ನ ಇಡೀ ಬದುಕನ್ನೇ ತಾಯಿ ಪರಿಮಳ ಮುಡಿಪಾಗಿಡುವುದು ವಿಶೇಷ.

ಮಾ.11ರಿಂದ ಪ್ರತಿ ದಿನ ರಾತ್ರಿ 8 ಕ್ಕೆ ಪ್ರಸಾರ ಇದರೊಂದಿಗೆ ಸಾಕಷ್ಟು ಕನಸುಗಳನ್ನು ಹೊತ್ತು ನಿಂತಿರುವ ಪರಿಮಳ- ಮಂಜುನಾಥ್‌ ಕುಟುಂಬ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತದೆ ಎಂಬುದು ಕಥಾವಸ್ತು. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ವೇದಾಂತ್‌ ವಸಿಷ್ಠ ಇಲ್ಲಿ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ವಿರುದ್ದವಾಗಿ ವೇದಾಂತ್‌ ಇರುತ್ತಾನೆ. ನನಗೆ ಹೆಣ್ಣು ಮಕ್ಕಳ ಸಹವಾಸವೇ ಬೇಡ ಎನ್ನುವ ವೇದಾಂತ್‌, ಹೆಣ್ಣನ್ನು ಸದಾದ್ವೇಶಿಸುವವನು. ಅಂತಹವನ ಲೈಫ‌ಲ್ಲಿ ಪ್ರೀತಿ ಚಿಗುರುತ್ತದೆ. ಅದು ಯಾರ ಮೇಲೆ ಎಂಬುದು ಸಸ್ಪೆನ್ಸ್‌. ಜೀ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳುವಂತೆ, “ಗಟ್ಟಿಮೇಳ’ ಎಲ್ಲರ ಬದುಕಲ್ಲೂ ನಡೆಯುವಂತಹ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಧಾರಾವಾಹಿ’ ಅಂತೆ.

Advertisement

Udayavani is now on Telegram. Click here to join our channel and stay updated with the latest news.

Next