Advertisement

ಟೂರಿಸ್ಟ್‌ ವಾಹನಗಳಿಗೆ ಕೇರಳದಲ್ಲಿ ಬಿಗಿ ನಿಯಮ

01:11 AM Dec 31, 2022 | Team Udayavani |

ಉಡುಪಿ : ಟೂರಿಸ್ಟ್‌ ವಾಹನಗಳಿಗೆ ಕೇರಳ ರಾಜ್ಯದಲ್ಲಿ ಎರಡು ತಿಂಗಳುಗಳಿಂದ ಬಿಗಿ ನಿಯಮ ವಿಧಿಸಿರುವುದರಿಂದ ರಾಜ್ಯದ ಬಸ್‌ಗಳು ಅತ್ತ ತೆರಳಲು ಹಿಂದೇಟು ಹಾಕುತ್ತಿವೆ.

Advertisement

ಕೇರಳದಲ್ಲಿ ಟೂರಿಸ್ಟ್‌ ಬಸ್‌ಗಳ ನಿಯಮಾವಳಿಯಂತೆ ಬಿಳಿ ಹಾಗೂ ಹಳದಿ ಮಿಶ್ರಿತ ಬಿಳಿ ಬಣ್ಣವನ್ನು ಒಳಗೊಂಡಿರಬೇಕು. ಆದರೆ ಈಗಾಗಲೇ ಶೇ. 90ರಷ್ಟು ಬಸ್‌ಗಳು ತಮ್ಮದೇ ಆದ ಬಣ್ಣವನ್ನು ಬಳಿದು ಸಿಂಗರಿಸಿಕೊಂಡಿವೆ. ಜತೆಗೆ ಬಸ್‌ನ ಹೊರಭಾಗದಲ್ಲಿ ಹೆಚ್ಚುವರಿ ಲೈಟ್‌ಗಳನ್ನೂ ಅಳವಡಿಸಲಾಗುತ್ತಿದೆ. ಜತೆಗೆ ಡಿಜೆ ಸದ್ದು. ಈ ಎಲ್ಲ ಅಂಶಗಳು ಅಪಘಾತಕ್ಕೆ ಕಾರಣವಾಗುತ್ತಿವೆ ಎಂಬ ಅಂಶವನ್ನು ಇಟ್ಟುಕೊಂಡು ಕೇರಳ ಸರಕಾರ ಟೂರಿಸ್ಟ್‌ ಬಸ್‌ಗಳಿಗೆ ಬಿಗಿ ನಿಯಮವನ್ನು ಜಾರಿಗೊಳಿಸಿದೆ.

ಕೇರಳಕ್ಕೆ ತೆರಳಲು ಹಿಂದೇಟು
ಕೇರಳದ ಈ ನಿಯಮ ದಿಂದ ಬೇಸತ್ತಿರುವ ರಾಜ್ಯದ ಟೂರಿಸ್ಟ್‌ ಬಸ್‌ಗಳು ಕೇರಳಕ್ಕೆ ತೆರಳಲು ಹಿಂದೇಟು ಹಾಕು ತ್ತಿವೆ. ದೇವರ ನಾಡು ಎಂದು ಕರೆಯಲ್ಪ ಡುವ ಕೇರಳಕ್ಕೆ ಕರ್ನಾಟಕ ರಾಜ್ಯ ಸಹಿತ ಇತರೆಡೆಗಳಿಂದ ಅತ್ಯಧಿಕ ಮಂದಿ ಪ್ರವಾಸಿಗರು ತೆರಳು ತ್ತಾರೆ. ಪ್ರಸ್ತುತ ಕೇರಳ ಸಂಪರ್ಕಿಸುವ ಗಡಿಭಾಗ ದವರೆಗೆ ಅವಿಭಜಿತ ದ.ಕ. ಜಿಲ್ಲೆಯ ಬಸ್‌ಗಳು ತೆರಳಿ ಅನಂತರ ಕೇರಳದ ಬಸ್‌ಗಳಿಗೆ ಪಾಸಿಂಗ್‌ ನೀಡುವ ವ್ಯವಸ್ಥೆಯನ್ನೂ ಕೆಲವರು ರೂಢಿಸಿಕೊಂಡಿದ್ದಾರೆ. ರಾಜ್ಯದ ಕೆಲವು ಬಸ್‌ಗಳಿಗೆ ಈಗಾಗಲೇ ಎಚ್ಚರಿಕೆ ನೀಡಿ 5 ಸಾವಿರ ರೂ.ಗಳವರೆಗೆ ದಂಡವನ್ನೂ ವಿಧಿಸಲಾಗಿದೆ.

ಕೇರಳದಲ್ಲಿ ಮಾರುಕಟ್ಟೆಗೆ ಹೊಡೆತ
ಕರ್ನಾಟಕದ ಹೆಚ್ಚಿನ ಬಸ್‌ಗಳು ಹಾಗೂ ಇತರ ವಾಹನಗಳ ಆಲೆóàಷನ್‌ ಹೆಚ್ಚಾಗಿ ಕೇರಳ ಹಾಗೂ ತಮಿಳುನಾಡುವಿನಲ್ಲಿ ಮಾಡಲಾ ಗುತ್ತದೆ. ಕಡಿಮೆ ವೆಚ್ಚಕ್ಕೆ ಹೆಚ್ಚಿನ ಪರಿಕರಗಳನ್ನು ನೀಡುತ್ತಾರೆ ಎಂಬ ಕಾರಣಕ್ಕಾಗಿ. ಆದರೆ ಸಂಚಾರ ನಿಯಮಾವಳಿಗೆ ಸಂಬಂಧಿಸಿದಂತೆ ಕಠಿನ ಕಾನೂನು ಜಾರಿಗೆ ತಂದ ಪರಿಣಾಮ ಅಲ್ಲಿನ ಪೈಂಟಿಂಗ್‌, ಆಲೆóàಷನ್‌ ಅಂಗಡಿಗಳೂ ವ್ಯಾಪಾರ ವಿಲ್ಲದೆ ಕಂಗೆಟ್ಟು ಹೋಗಿವೆ.

ಮಡಿಕೇರಿಯಲ್ಲಿಯೂ ಕಠಿನ ನಿಯಮ
ಕೇರಳದಂತೆ ಮಡಿಕೇರಿಯಲ್ಲಿಯೂ ಟೂರಿಸ್ಟ್‌ ಬಸ್‌ಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಲೈಟಿಂಗ್‌, ಡಿಜೆಗಳನ್ನು ಗುರುತಿಸಿ ದಂಡ ಹಾಕಲಾಗುತ್ತಿದೆ. ಕೆಲವು ಬಸ್‌ಗಳ ಲೈಟಿಂಗ್‌ಗಳನ್ನೂ ಸ್ಥಳದಲ್ಲಿಯೇ ತೆರವು ಮಾಡಿದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಟೂರಿಸ್ಟ್‌ ಬಸ್‌ ಮಾಲಕರು.

Advertisement

ಯಾಕಾಗಿ ಬಿಗಿ ನಿಯಮ?
ಈ ವರ್ಷದ ಅಕ್ಟೋಬರ್‌ನಲ್ಲಿ ಕೇರಳದ ವಾಳಯಾರ್‌-ವಡಕ್ಕಂಚೇರಿ ರಸ್ತೆಯಲ್ಲಿ ಟೂರಿಸ್ಟ್‌ ಬಸ್‌ ಹಾಗೂ ಸರಕಾರಿ ಬಸ್‌ನ ನಡುವೆ ಢಿಕ್ಕಿ ಸಂಭವಿಸಿ ಐವರು ಶಾಲಾ ಮಕ್ಕಳು ಹಾಗೂ 9 ಮಂದಿ ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಗಂಭೀರವಾಗಿ ತೆಗೆದು ಕೊಂಡ ಸರಕಾರ ಟೂರಿಸ್ಟ್‌ ಬಸ್‌ಗಳಿಗೆ ಕಲರ್‌ ಕೋಡಿಂಗ್‌ ಸಹಿತ ಕೆಲವೊಂದು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.

ಏಕರೂಪದ ನಿಯಮಾವಳಿ ಅಗತ್ಯ
ಟೂರಿಸ್ಟ್‌ ಬಸ್‌ಗಳ ನಿರ್ವಹಣೆ ಬಲು ದುಬಾರಿಯಾಗಿದೆ. ಪ್ರವಾಸೋ ದ್ಯಮಕ್ಕೆ ಟೂರಿಸ್ಟ್‌ ವಾಹನಗಳೇ ಆಧಾರವಾಗಿರುವ ಈ ಸಂದರ್ಭದಲ್ಲಿ ಇತರ ರಾಜ್ಯಗಳಲ್ಲಿ ನಮ್ಮ ವಾಹನಗಳಿಗೆ ದಂಡ ಹಾಕಿದರೆ ಅದು ಬಹುದೊಡ್ಡ ಹೊರೆ ಎನಿಸುತ್ತದೆ. ಕರ್ನಾಟಕಕ್ಕೆ ಹೋಲಿಸಿದರೆ ಕೇರಳದಲ್ಲಿ ತೆರಿಗೆ ಕಡಿಮೆ. ಟೂರಿಸ್ಟ್‌ ನಿಯಮಾವಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಏಕರೂಪದ ತೆರಿಗೆ ಹಾಗೂ ನಿಯಮಾವಳಿಗಳು ಬಂದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.
– ರಾಕೇಶ್‌, ಕಾರ್ಯದರ್ಶಿ, ದ.ಕ. ಟೂರಿಸ್ಟ್‌ ಬಸ್‌ಅಸೋಸಿಯೇಶನ್‌

Advertisement

Udayavani is now on Telegram. Click here to join our channel and stay updated with the latest news.

Next