Advertisement

ಸಾಹಿತ್ಯ ಸಂಶೋಧನೆಯಿಂದ ಹೊಸ ಓದುಗರು

12:52 PM Jan 29, 2018 | Team Udayavani |

ಮೈಸೂರು: ಸಾಹಿತ್ಯಸ್ತಕರು, ಸಾಹಿತಿಗಳು ಹಾಗೂ ವಿಮರ್ಶಕರ ಹಲವು ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭಿಸಿರುವ ಜಿಲ್ಲಾ ಚಕೋರ ವೇದಿಕೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು.

Advertisement

ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌, ಕಾವ್ಯವೆಂಬುದು ಅಶಾಸ್ತ್ರೀಯವಾದದ್ದು, ಅದು ವಿಕೇಂದ್ರಿಕರಣವಾಗಬೇಕು.

ಕಾವ್ಯ ರಚನೆ ಎಂಬುದು ಭಾವ ಸಂವಾದದ ಜತೆಗೆ ಬುದ್ಧಿ ಮತ್ತು ತಾತ್ವಿಕ ಸಂಘರ್ಷವಿರಬೇಕು. ವಿಮರ್ಶೆಯೂ ಸಹ ಉತ್ತಮವಾದ ಸಾಹಿತ್ಯ ಮತ್ತು ಬರವಬಣಿಗೆಯಾಗಿದ್ದು, ಸಾಹಿತ್ಯಕ್ಕೆ ನೀಡಲಾಗುವ ಪ್ರಾಮುಖ್ಯತೆಯನ್ನು ವಿಮರ್ಶೆಗೂ ನೀಡಬೇಕಿದೆ.

ಸಂಶೋಧನೆಯ ಬರವಣಿಗೆ ಸಹ ಸೃಜಲಶೀಲ ಸಾಹಿತ್ಯವಾಗಲಿದ್ದು, ಸಂಶೋಧನೆಯಲ್ಲಿ ಉದ್ಭವಿಸುವ ಹೊಸ ವಿಚಾರಗಳು ಸಾಹಿತ್ಯಕ್ಕೆ ಪುಷ್ಟಿ ನೀಡುತ್ತದೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಓದುಗರನ್ನು ಕಂಡುಕೊಳ್ಳಲು ನೆರವಾಗಲಿದೆ ಎಂದರು.

ಪುಸ್ತಕದಲ್ಲೇ ಓದಬೇಕಿದೆ: ಸಾಹಿತ್ಯವನ್ನು ಪುಸ್ತಕದಲ್ಲೇ ಓದಬೇಕಿದ್ದು, ಇದರಿಂದ ಮಾತ್ರ ಅನುಭವದೊಂದಿಗೆ ಸಾಹಿತ್ಯ ಚೆನ್ನಾಗಿ ಅರ್ಥವಾಗುತ್ತದೆ. ಇತ್ತೀಚಿಗೆ ಸಾಹಿತ್ಯದ ಮಜಲು ವಿಸ್ತಾರಗೊಂಡಿರುವುದರಿಂದ ಇಂಟರ್‌ನೆಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಓದುತ್ತಿದ್ದಾರೆ.

Advertisement

ಇದು ಒಳ್ಳೆಯದಾಗಿದ್ದು, ಕನ್ನಡ ಸಾಹಿತ್ಯ ಉಳಿವಿಗೆ ಉತ್ತಮ ಮಾರ್ಗವಾಗಿದೆ. ಆದರೆ ಸಾಹಿತ್ಯಗಳನ್ನು ಪುಸ್ತಕದಲ್ಲಿ ಓದುವ ಸಾಹಿತ್ಯದ ರುಚಿಯೇ ಬೇರೆಯಾಗಿರುವುದರಿಂದ ಪುಸ್ತಕದಲ್ಲಿ ಸಾಹಿತ್ಯ ಓದುವ ಸಂಸ್ಕೃತಿ ಉಳಿಸಬೇಕಿದೆ ಎಂದು ಹೇಳಿದರು. ಅಕಾಡೆಮಿ ಪ್ರತಿನಿಧಿಗಳಾದ ಡಾ.ಶೀಲ್ಪ$ಶ್ರೀ, ಮೀ.ಗೂ.ರಮೇಶ್‌ ಹಾಜರಿದ್ದರು.

ಚಕೋರದ ಉದ್ದೇಶ: ಕರ್ನಾಟಕ ಸಾಹಿತ್ಯ ಅಕಾಡೆಮಿ ವಿನೂತನ ಪರಿಕಲ್ಪನೆಯಾಗಿರುವ ಚಕೋರ ವೇದಿಕೆ ಕವಿಗಳು, ವಿಮರ್ಶಕರು ಹಾಗೂ ಓದುಗರನ್ನು ಒಂದೇ ವೇದಿಕೆಯಲ್ಲಿ ತಂದು ಆತ್ಮೀಯ ಹಾಗೂ ಅನೌಪಚಾರಿಕ ಪರಿಸರ ನಿರ್ಮಿಸಿ ಮುಕ್ತ ಸಂವಾದ, ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದಾಗಿದೆ.

ವೇದಿಕೆಯ ಎಲ್ಲಾ ಸದಸ್ಯರು ನಿಗದಿತ ದಿನದಂದು ಒಂದೆಡೆ ಸೇರಿ, ಕವಿಗಳ ಕಾವ್ಯಕ್ಷಮತೆ, ಕಾದಂಬರಿ, ನಾಟಕ, ಪ್ರಬಂಧ ಮತ್ತಿತರ ಸೃಜನಶೀಲ ಬರವಣಿಗೆಗಳ ವಾಚನ ಹಾಗೂ ಸಂವಾದ ಮಾಡಲಿದ್ದಾರೆ. ಇದರ ಜತೆಗೆ ಕವಿಗೋಷ್ಠಿ, ಕನ್ನಡದ ಆಯ್ದ ಕಾವ್ಯಗಳ ಸಂವಾದ, ಕೃತಿಗಳ ಬಗ್ಗೆ ಚರ್ಚೆ, ಪ್ರಚಲಿತ ಸಂಗತಿಗಳ ಬಗ್ಗೆಯೂ ಸಂವಾದ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next