ಮಂಗಳೂರು: ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಈಗಾಗಲೇ ಸಲ್ಲಿಸಿ ಬಾಕಿಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸರಕಾರ ಮಂಗಳವಾರ ಆದೇಶಿಸಿದೆ.
ರಾಜ್ಯದಲ್ಲಿ ಒಟ್ಟು 1.55 ಲಕ್ಷ ಅರ್ಜಿಗಳು ಅರ್ಹವೆಂದು ಕಂಡುಬಂದಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ 3,356 ಅರ್ಜಿ ಹಾಗೂ ಉಡುಪಿ ಜಿಲ್ಲೆಯ 4,367 ಅರ್ಜಿಗಳನ್ನು ಅರ್ಹರು ಎಂದು ಸರಕಾರ ಗುರುತಿಸಿದೆ. ಶೀಘ್ರ ಇವರಿಗೆ ಕಾರ್ಡ್ ದೊರೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಲ್ಲಿಕೆಯಾದ 3,851 ಅರ್ಜಿಗಳ ಪೈಕಿ 3,597 ಅರ್ಜಿಗಳ ಸ್ಥಳ ಪರಿಶೀಲನೆ ಇಲ್ಲಿಯವರೆಗೆ ಆಗಿದ್ದು, ಈ ಪೈಕಿ 3,356 ಅರ್ಜಿಗಳು ಅರ್ಹ ಎಂದು ಸರಕಾರ ಪರಿಗಣಿಸಿದೆ. ಉಡುಪಿ ಜಿಲ್ಲೆಯಲ್ಲಿ 5,657 ಅರ್ಜಿಗಳ ಪೈಕಿ 4,501 ಅರ್ಜಿಗಳ ಸ್ಥಳ ಪರಿಶೀಲನೆ ನಡೆದಿದೆ. ಈ ಪೈಕಿ 4,367 ಅರ್ಜಿಗಳು ಅರ್ಹ ಎಂದು ಇದೀಗ ನಿರ್ಧರಿಸಿದೆ.
ಹೊಸ ಆದ್ಯತಾ ಪಡಿತರ ಚೀಟಿ ಕೋರಿ 2017ರಿಂದ 2022ರ ವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ಈ ಪೈಕಿ ವಾರ್ಷಿಕ ಹಿರಿತನದ ಆಧಾರದ ಮೇಲೆ ಅರ್ಜಿ ವಿಲೇವಾರಿಗೆ ನಿರ್ಧರಿಸಲಾಗಿದೆ. ಹೀಗಾಗಿ 2017-18ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮೊದಲು ವಿಲೇವಾರಿ ಮಾಡಿದ ನಂತರ ಅದೇ ಕ್ರಮದಲ್ಲಿ ಇತರ ವರ್ಷದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಹಿರಿತನದ ಆಧಾರದಲ್ಲಿ ವಿಲೇವಾರಿ ಮಾಡಲಾಗುತ್ತದೆ.
ಇದನ್ನೂ ಓದಿ: ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಸಂಸದ ಧೈರ್ಯಶೀಲ ಮಾನೆ ನಿಯುಕ್ತಿ