Advertisement

ಇಂದು ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಪ್ರಮಾಣ: ಅಮೆರಿಕಕ್ಕೆ ಅಧ್ಯಕ್ಷ ಸಂಭ್ರಮ

12:23 AM Jan 20, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಾಟ್‌ ಪಕ್ಷದ ನಾಯಕ ಜೋ ಬೈಡೆನ್‌ ಜ. 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಕೂಡ ಪದಗ್ರಹಣ ಮಾಡಲಿದ್ದಾರೆ.

Advertisement

ಹಿಂದಿನ ವರ್ಷಗಳಿಗಿಂತ ಭಿನ್ನ :

ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಭಿನ್ನವಾಗಿರಲಿದೆ. ಜ. 6ರಂದು ಕ್ಯಾಪಿಟಲ್‌ ಹಿಲ್‌ ಹಿಂಸಾಚಾರದ ಬಳಿಕ ಮುಜುಗರಕ್ಕೆ ಈಡಾಗಿರುವ ಡೊನಾಲ್ಡ್‌ ಟ್ರಂಪ್‌ ಭಾಗವಹಿಸುತ್ತಿಲ್ಲ.

ಟಿಕೆಟ್‌ ಮಾರಾಟವಿಲ್ಲ :ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ಇಲ್ಲ.

ದಿನದ ಕಾರ್ಯಕ್ರಮವೇನು? : ಅಮೆರಿಕದ ಜನಪ್ರಿಯ ನಟಿ ಜೆನ್ನಿಫ‌ರ್‌ ಲೋಪೆಜ್‌ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ

  • ಹಿನ್ನೆಲೆ ಗಾಯಕಿ ಲೇಡಿ ಗಾಗಾ ರಾಷ್ಟ್ರಗೀತೆ ಹಾಡಲಿದ್ದಾರೆ.
Advertisement

ಯಾವ ಅಂಶ ಪ್ರಸ್ತಾವ ಸಂಭವ? :

  •  ಕೋವಿಡ್ ವಿರುದ್ಧ ಹೋರಾಟ, ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸುವುದು.
  •  ಜ. 1ರಿಂದ ಅನ್ವಯವಾಗುವಂತೆ ಅಮೆರಿಕದಲ್ಲಿ ಮಾನ್ಯತೆ ಇಲ್ಲದೆ ವಾಸ್ತವ್ಯ ಹೂಡಿರುವವರಿಗೆ ತಾತ್ಕಾಲಿಕ ಕಾನೂನು ಮಾನ್ಯತೆಯ ವಾಸ್ತವ್ಯ ಅವಕಾಶ ಘೋಷಣೆ.
  • 11 ಲಕ್ಷಕ್ಕೂ ಅಧಿಕ ಮಂದಿಗೆ 8 ವರ್ಷಗಳಲ್ಲಿ ಪೌರತ್ವ ನೀಡಿಕೆಗೆ ಕ್ರಮ.

ಪ್ರಮಾಣ ವಚನದ ಅನಂತರ ಏನು? :

  • ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಸೇನೆಯಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.

 

ಸಮಯ:

ಭಾರತೀಯ ಕಾಲಮಾನ ರಾತ್ರಿ 10 ಗಂಟೆ

ಪ್ರಮಾಣ ವಚನ ಬೋಧಿಸುವವರು ಯಾರು? :

ಜೋ ಬೈಡೆನ್‌ ಅವರಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ಜಾನ್‌ ರಾಬರ್ಟ್‌

ಕಮಲಾ ಹ್ಯಾರಿಸ್‌ಗೆ  : ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ  ಸೋನಿಯಾ ಸೋಟೊಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next