ಕುರುಗೋಡು: ಸಮೀಪದ ಕೊಂಚಗೇರಿ ಗ್ರಾಪಂಯ ಎರಡನೇ ಅವಧಿಯ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರಕ್ಕೆ ಅಧ್ಯಕ್ಷರ ಚುನಾವಣೆ ಶನಿವಾರ ಶಾಂತಿಯುತವಾಗಿ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಂಡ ಚುನಾವಣೆ 10 ರಿಂದ 12 ಗಂಟೆ ವರೆಗೆ ನಾಮಪತ್ರ ಸಲ್ಲಿಕೆಗೊಂಡವು, 12 ರಿಂದ 12.30 ವರೆಗೆ ನಾಮಪತ್ರ ಪರಿಶೀಲನೆ, 12.30 ರಿಂದ 1 ಗಂಟೆ ವರೆಗೆ ನಾಮ ಪತ್ರ ಹಿಂಪಡೆಯಲಾಯಿತು, 1 ಗಂಟೆಯಿಂದ ಚುನಾವಣೆ ಪರಿಕ್ರಿಯೆ ಪ್ರಾರಂಭಗೊಂಡಿತು ಈ ಚುನಾವಣೆ ಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಪೂಜಾರಿ ನಾರಾಯಣಮ್ಮ ಮತ್ತು ಮುದ್ವಿರಮ್ಮ ಇಬ್ಬರು ಸಾಮಾನ್ಯ ಮಹಿಳೆ ಮೀಸಲಾತಿ ಕ್ಷೇತ್ರದಿಂದ ನಾಮ ಪತ್ರ ಸಲ್ಲಿಸಿದರು.
ಪೂಜಾರಿ ನಾರಾಯಣಮ್ಮ 8 ಮತಗಳು ಪಡೆದರೆ ಜಿ.ಮುದ್ವಿರಮ್ಮ 6 ಮತಗಳು ಪಡೆದ ಹಿನ್ನಲೆ ನೂತನ ಅಧ್ಯಕ್ಷೆಯಾಗಿ ಪೂಜಾರಿ ನಾರಾಯಣಮ್ಮ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಶಿವಪ್ಪ ಸುಬೇದಾರ್ ತಿಳಿಸಿದರು.
ನೂತನ ಅಧ್ಯಕ್ಷೆ ಪೂಜಾರಿ ನಾರಾಯಣಮ್ಮ ಮಾತನಾಡಿ, ನನ್ನ ಮೇಲೆ ವಿಶ್ವಾಸ ಹಿಟ್ಟು ಗ್ರಾಪಂ ಸದಸ್ಯರುಗಳು ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಎಲ್ಲ ಗ್ರಾಪಂ ಸದಸ್ಯರನ್ನು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದಲ್ಲಿ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ, ಬೀದಿ ದೀಪಾ, ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಶ್ರಮೀಸಲಾಗುವುದು ಎಂದು ತಿಳಿಸಿದರು.
ನಂತರ ಗ್ರಾಪಂ ಸದಸ್ಯರುಗಳು ನೂತನ ವಾಗಿ ಆಯ್ಕೆ ಗೊಂಡ ಅಧ್ಯಕ್ಷರಿಗೆ ಹೂ ಮಾಲೆ ಹಾಕಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಿಡಿಓ ವೀರೇಶ್ ಹಾಗೂ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.