Advertisement

ಹರಿದ ನೋಟು ವಿನಿಮಯಕ್ಕೆ ಹೊಸ ನೀತಿ

11:47 AM Jun 15, 2018 | Team Udayavani |

ಮುಂಬೈ: ಹೊಸ 2000 ರೂ. ಮತ್ತು 200 ರೂ. ಮುಖಬೆಲೆಯ ಹರಿದ ನೋಟುಗಳ ವಿನಿಮಯಕ್ಕೆ ಹೊಸ ನಿಯಮಾವಳಿ ಜಾರಿಗೆ ತರುವುದಾಗಿ ಆರ್‌ಬಿಐ ಹೇಳಿದೆ. 

Advertisement

 ಸದ್ಯ ಈ ಎರಡೂ ಮುಖಬೆಲೆಯ ಹರಿದ ನೋಟುಗಳನ್ನು ವಿನಿಮಯ ಮಾಡಲು ಬ್ಯಾಂಕುಗಳು ಒಪ್ಪುತ್ತಿಲ್ಲ. ಇದಕ್ಕೆ ಆರ್‌ಬಿಐನ ನಿಯಮವೇ ಕಾರಣವಾಗಿದೆ. ಅಲ್ಲದೆ ಈ ಸಂಬಂಧ ಗ್ರಾಹಕರ ದೂರುಗಳು ಆರ್‌ಬಿಐ ತಲುಪಿದ್ದು, ಶೀಘ್ರದಲ್ಲೇ ಹೊಸ ನಿಯಮಾವಳಿ ಜಾರಿಗೆ ತರುವುದಾಗಿ ಅದು ತಿಳಿಸಿದೆ. 

ರಿಸರ್ವ್‌ ಬ್ಯಾಂಕಿನ ನಿಯಮಾ ವಳಿಗಳ ಪ್ರಕಾರ, 50 ರೂ.ಗಿಂತ ಹೆಚ್ಚಿನ ಮುಖಬೆಲೆಯ ಎಲ್ಲಾ ಹರಿದ ಅಥವಾ ಮಣ್ಣಾದ ನೋಟುಗಳನ್ನು ಬ್ಯಾಂಕುಗಳು ಸ್ವೀಕರಿಸಬೇಕು. ಅಂದರೆ, ಗ್ರಾಹಕರು ನೋಟಿನ 70,75,80 ಮತ್ತು 84 ಚದರ ಸೆಂಟಿಮೀಟರ್‌ನಷ್ಟು ಭಾಗವನ್ನು ತಂದುಕೊಟ್ಟರೆ ಇದಕ್ಕೆ ಬದಲಾಗಿ ಬೇರೆ ನೋಟು ಕೊಡಬಹುದು ಎಂದಿದೆ. ಆದರೆ ಇದರಲ್ಲಿ 50, 100, 500, 1000 ಮುಖಬೆಲೆಯ ನೋಟುಗಳನ್ನಷ್ಟೇ ಉಲ್ಲೇಖೀ ಸಲಾಗಿದೆ. ಇಲ್ಲಿ 200 ಮತ್ತು 2000 ಮುಖಬೆಲೆಯ ನೋಟುಗಳನ್ನು ಉಲ್ಲೇಖೀಸದೇ ಇರುವುದರಿಂದ ಬ್ಯಾಂಕು ಗಳು ಬದಲಾವಣೆಗೆ ಒಪ್ಪುತ್ತಿಲ್ಲ. ಇದರ ಜತೆಗೆ 2017ರ ಜು.3 ರಂದು ಹೊಸ ನಿಯಮ ಜಾರಿ ಮಾಡಿದ್ದು ಇದರಲ್ಲೂ ಮಣ್ಣಾದ ನೋಟುಗಳನ್ನು ಬದಲಾವಣೆ ಮಾಡಿಕೊಡಬಹುದು ಎಂದಿದೆ. ಆದರೆ, 2000 ರೂ. ನೋಟಿನ ಬಗ್ಗೆ ಪ್ರಸ್ತಾಪವಿಲ್ಲ ಎಂಬುದು ಬ್ಯಾಂಕ್‌ ವಾದವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next