ಹೊಸದಿಲ್ಲಿ: “ಇನ್ನು ಮೂರು ವರ್ಷದಲ್ಲಿ ಅಂದರೆ 2022ರೊಳಗೆ ಹೊಸ ಸಂಸತ್ ಭವನ ನಿರ್ಮಾಣವಾಗಲಿದೆ. ಈಗಿರುವ ಸಂಸತ್ ಭವನದಲ್ಲಿ ಸಂಸದರಿಗೆ ಕುಳಿತುಕೊಳ್ಳಲೂ ಸಾಕಷ್ಟು ಜಾಗವಿಲ್ಲ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಗೃಹ ಮತ್ತು ನಗಾರಭಿವೃದ್ಧಿ ಸಚಿವ ಹರ್‌ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸೆಂಟ್ರಲ್ ವಿಸ್ತಾ, ಸಂಸತ್ ಹಾಗೂ ಸಾಮಾನ್ಯ ಕೇಂದ್ರ ಕಾರ್ಯಾಲಯಗಳ ಮರುನಿರ್ಮಾಣ ಯೋಜನೆಯ ಕನ್ಸಲ್ಟೆನ್ಸಿ ಬಿಡ್ ಅನ್ನು ಶುಕ್ರವಾರ ಗುಜರಾತ್ ಮೂಲದ ಎಚ್‌ಸಿಪಿ ಡಿಸೈನ್ ಕಂಪೆನಿ ಪಡೆದ ಬೆನ್ನಲ್ಲೇ ಸಚಿವ ಪುರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಕನ್ಸಲ್ಟೆನ್ಸಿ ಸೇವೆಗಾಗಿ ಈ ಕಂಪೆನಿಗೆ 229.75 ಕೋಟಿ ರೂ. ಪಾವತಿಸಲಾಗುತ್ತದೆ. ಸಂಸ್ಥೆಯು ಇಡೀ ಯೋಜನೆಯ ಮಾಸ್ಟರ್‌ಪ್ಲಾನ್ ಸಿದ್ಧಪಡಿಸುತ್ತದೆ. ಈ ಮಾಸ್ಟರ್‌ಪ್ಲಾನ್‌ನಲ್ಲಿ ವಿನ್ಯಾಸಗಳು, ವೆಚ್ಚದ ಅಂದಾಜು, ಸಂಚಾರಕ್ಕೆ ಸಂಬಂಧಿಸಿದ ಯೋಜನೆ, ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಎಲ್ಲವೂ ಒಳಗೊಂಡಿರಲಿದೆ. ಕನ್ಸಲ್ಟೆಷನ್ ಶುಲ್ಕವು ಇಡೀ ಯೋಜನೆಯ ಒಟ್ಟು ವೆಚ್ಚದ ಶೇ.3ರಷ್ಟಿರಲಿದೆ ಎಂದೂ ಪುರಿ ಮಾಹಿತಿ ನೀಡಿದ್ದಾರೆ. ಜತೆಗೆ, ಐತಿಹಾಸಿಕ ರೈಸಿನಾ ಹಿಲ್ ಕಾಂಪ್ಲೆಕ್ಸ್ ಹಾಗೂ ಸಂಸತ್ ಭವನದ ಬಾಹ್ಯರೂಪದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.
ಯಾವಾಗ ನಿರ್ಮಾಣ?
2022ರಲ್ಲಿ ದೇಶದ 75ನೇ ಸ್ವಾತಂತ್ರ್ಯ ದಿನ ಗಮನದಲ್ಲಿ ಟ್ಟುಕೊಂಡು ಈ ಯೋಜನೆ
ಇಂಡಿಯಾಗೇಟ್‌ನಿಂದ ರಾಷ್ಟ್ರಪತಿ ಭವನದವರೆಗಿನ ಕಾರ್ಯ 2021ರ ನವೆಂಬರ್‌ನೊಳಗೆ ಪೂರ್ಣ
ಮಾರ್ಚ್ 2022ರೊಳಗೆ ಹೊಸ ಸಂಸತ್ ಭವನ
ಮಾರ್ಚ್ 2024ರಲ್ಲಿ ಸಾಮಾನ್ಯ ಕೇಂದ್ರ ಕಾರ್ಯಾಲಯ