Advertisement

ಹೊಸ ಸಂಸತ್ ಭವನ ನಿರ್ಮಾಣದ ಹೊಣೆ ಟಾಟಾ ಗ್ರೂಪ್ ಹೆಗಲಿಗೆ ; ಬಿಡ್ ಮೊತ್ತ ಎಷ್ಟು ಗೊತ್ತಾ?

07:36 PM Sep 16, 2020 | Hari Prasad |

ಹೊಸದಿಲ್ಲಿ: ಎಲ್ಲವೂ ಯೋಜನೆಯಂತೆ ನಡೆದರೆ ಇನ್ನೆರಡು ವರ್ಷಗಳೊಳಗೆ ನಮ್ಮ ಸಂಸದರು ಹೊಸ ಸಂಸತ್ ಭವನದಲ್ಲಿ ಕುಳಿತು ಕಲಾಪಗಳನ್ನು ನಡೆಸಲಿದ್ದಾರೆ.

Advertisement

ಪ್ರಸ್ತಾವಿತ ನೂತನ ಸಂಸತ್ ಭವನದ ನಿರ್ಮಾಣದ ಹೊಣೆ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ (TPL)ನ ಪಾಲಾಗಿದೆ. 861.2 ಕೋಟಿ ರೂಪಾಯಿಗಳ ಬಿಡ್ ಮೊತ್ತಕ್ಕೆ TPL ಈ ಪ್ರತಿಷ್ಠಿತ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಈ ನೂತನ ಪಾರ್ಲಿಮೆಂಟ್ ಸಂಕೀರ್ಣ ನಿರ್ಮಾಣದ ಜವಾಬ್ದಾರಿಯನ್ನು 861.2 ಕೋಟಿ ರೂಪಾಯಿಗಳ ಬಿಡ್ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ.

ಈ ಪ್ರಸ್ತಾವಿತ ಹೊಸ ಶಕ್ತಿ ಕೇಂದ್ರದ ನಿರ್ಮಾಣ ಕಾರ್ಯ ಒಂದು ವರ್ಷದ ಒಳಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಉದ್ದೇಶಿತ ಈ ಪ್ರಾಜೆಕ್ಟ್ ಗಾಗಿ ಕೇಂದ್ರೀಯ ಸಾರ್ವಜನಿಕ ಕಾಮಗಾರಿ ಇಲಾಖೆ ಇಂದು ಫೈನಾನ್ಷಿಯಲ್ ಬಿಡ್ ಗಳನ್ನು ತೆರೆದಿತ್ತು ಇದರಲ್ಲಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸುವ ಮೂಲಕ ಈ ಪ್ರತಿಷ್ಠಿತ ಕಟ್ಟಡದ ನಿರ್ಮಾಣದ ಜವಾಬ್ದಾರಿಯನ್ನು ತನ್ನದಾಗಿಸಿಕೊಂಡಿತು.

ಈ ನೂತನ ಸಂಸತ್ ಕಟ್ಟಡದ ನಿರ್ಮಾಣ ಮತ್ತು ಬಳಿಕ ಐದು ವರ್ಷಗಳ ಕಾಲ ಅದರ ನಿರ್ವಹಣೆಯ ಜವಾಬ್ದಾರಿಯೂ ಟಾಟಾ ಸಂಸ್ಥೆಯದ್ದಾಗಿರಲಿದೆ.

Advertisement

ಇದನ್ನೂ ಓದಿ: ಲಡಾಖ್‌ನಲ್ಲಿ ಬೋಫೋರ್ಸ್‌ ಹೊವಿಟ್ಜರ್‌ ಫಿರಂಗಿ ಸ್ಥಾಪಿಸಲು ಸಿದ್ಧತೆ

ದೇಶದ ಹೆಸರಾಂತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಲಾರ್ಸೆನ್ ಆ್ಯಂಡ್ ಟರ್ಬೋ ಲಿಮಿಟೆಡ್ ನ್ನು ಹಿಂದಿಕ್ಕಿ ಟಾಟಾ ನಿರ್ಮಾಣ ಸಂಸ್ಥೆ ಈ ಬಿಡ್ ಅನ್ನು ತನ್ನದಾಗಿಸಿಕೊಂಡಿದ್ದು ವಿಶೇಷ. L&T 865 ಕೋಟಿ ರೂಪಾಯಿಗಳಿಗೆ ಬಿಡ್ ಮೊತ್ತವನ್ನು ಸಲ್ಲಿಸಿತ್ತು.

ಈ ಪ್ರತಿಷ್ಠಿತ ಬಿಡ್ ಅನ್ನು ಗೆದ್ದುಕೊಂಡಿರುವ ವಿಚಾರವನ್ನು ಟಾಟಾ ಸಮೂಹ ಸಂಸ್ಥೆ ಖಚಿತಪಡಿಸಿದೆ. ‘ಹೊಸ ಸಂಸತ್ ಭವನ ನಿರ್ಮಾಣ ಕಾರ್ಯದಲ್ಲಿ TPL L1 ಆಗಿದೆ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ’ ಎಂದು ಅದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಈ ಹೊಸ ಸಂಸತ್ ಭವನದ ನಿರ್ಮಾಣ ಕಾರ್ಯದ ಅಂದಾಜು ವೆಚ್ಚ 941 ಕೋಟಿ ರೂಪಾಯಿಗಳಾಗಬಹುದೆಂದು ಕೇಂದ್ರ ಸರಕಾರ ಲೆಕ್ಕ ಹಾಕಿತ್ತು ಎಂದೂ ಸಹ ಕಂಪೆನಿ ಹೇಳಿಕೊಂಡಿದೆ.

ಈಗಿರುವ ಸಂಸತ್ ಭವನದ ಕಟ್ಟಡ ಅತೀ ಬಳಕೆಯಾಗಿರುವುದರಿಂದ ಮತ್ತು ಸೂಕ್ತ ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿರುವುದರಿಂದ ಮೋದಿ ಸರಕಾರವು ಈ ವರ್ಷದ ಪ್ರಾರಂಭದಲ್ಲಿ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿತ್ತು.

ಇದನ್ನೂ ಓದಿ: ಅರಿವೇ ಗುರು: ಅಸಿಡಿಟಿ ನಿವಾರಣೆಗಾಗಿ ಇಲ್ಲಿದೆ ಕೆಲವು ಸಲಹೆ

Advertisement

Udayavani is now on Telegram. Click here to join our channel and stay updated with the latest news.

Next