Advertisement

ಆ.15ರಂದು “ಓಲಾ ಎಸ್‌1 ಪ್ರೋ’ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ

05:23 PM Aug 08, 2022 | Team Udayavani |

ಓಲಾ ಕಂಪನಿಯ ಬಹು ನಿರೀಕ್ಷಿತ ಇ-ಸ್ಟೂಟರ್‌ “ಓಲಾ ಎಸ್‌1 ಪ್ರೋ’, ಆ.15ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

Advertisement

ಇದರ ಅಂದಾಜು ಬೆಲೆ 1 ಲಕ್ಷ ರೂ. ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಒಂದು ಚಾರ್ಜ್‌ನಲ್ಲಿ 181 ಕಿ.ಮೀ. ಸಾಗಲಿರುವ ಇದು, 3.97 ಕಿ.ವ್ಯಾ. ಅವರ್‌ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಗರಿಷ್ಠ ವೇಗದ ಮಿತಿ ಪ್ರತಿ ಗಂಟೆಗೆ 115 ಕಿ.ಮೀ. ಇದ್ದು, ಈ ಸ್ಕೂಟರ್‌ 10 ಬಣ್ಣಗಳಲ್ಲಿ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.

ಇದೇ ಸಮಾರಂಭದಲ್ಲಿ, ಸದ್ಯದಲ್ಲೇ ಹೊರಬರಲಿರುವ ಓಲಾ ಕಂಪನಿಯ ಕಾನ್ಸೆಪ್ಟ್ ಕಾರ್‌ನ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next