Advertisement

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

03:15 PM Jul 05, 2024 | Team Udayavani |

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಗಳ ಪ್ರವೇಶಕ್ಕಾಗಿ ನಡೆಯುವ ನೀಟ್‌ (NEET-PG) ಪಿಜಿ ಪರೀಕ್ಷೆ ಆಗಸ್ಟ್‌ 11ರಂದು ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ(National Board Examinations-NBE) ಶುಕ್ರವಾರ (ಜುಲೈ 05) ಘೋಷಿಸಿದೆ.

Advertisement

ಇದನ್ನೂ ಓದಿ:Raichur; ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

ಈ ಬಾರಿಯ ನೀಟ್‌ ಪರೀಕ್ಷೆಯನ್ನು ಎರಡು ಶಿಫ್ಟ್‌ ಗಳಲ್ಲಿ ನಡೆಸಲಾಗುವುದು ಎಂದು ಏಜೆನ್ಸಿ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ. ಈ ಮೊದಲು ಜೂನ್‌ 22ರಂದು ನೀಟ್‌ ಪಿಜಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಪರೀಕ್ಷೆಗೆ ಒಂದು ಗಂಟೆ ಇರುವ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ನೀಟ್‌(NEET) ಪರೀಕ್ಷೆ ರದ್ದುಪಡಿಸಿದ ನಂತರ ಮಾತನಾಡಿದ್ದ, ಎನ್‌ ಬಿಇ ಅಧ್ಯಕ್ಷ ಡಾ.ಅಭಿಜಿತ್‌ ಸೇಠ್‌ ಮಾತನಾಡಿ, ಈ ನಿರ್ಧಾರವನ್ನು ಶಿಕ್ಷಣ ಸಚಿವಾಲಯ ತೆಗೆದುಕೊಂಡಿದ್ದು, ಪರೀಕ್ಷಾ ಪದ್ಧತಿಯನ್ನು ಪಾರದರ್ಶಕವಾಗಿ ನಡೆಸುವ ಮತ್ತು ಪರಿಶೀಲಿಸುವ ಅಗತ್ಯತೆ ಇದೆ ಎಂದು ತಿಳಿಸಿದೆ.

ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯ ಪರೀಕ್ಷಾ ಮಂಡಳಿ, ನೀಟ್‌ ಪಿಜಿ ಪರೀಕ್ಷೆಯನ್ನು ನಡೆಸುತ್ತಾ ಬಂದಿದೆ. ಇಷ್ಟು ವರ್ಷಗಳ ಕಾಲ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಒಂದೇ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ವರದಿಯಾಗಿಲ್ಲ.

Advertisement

ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸರ್ಕಾರದ ಸೈಬರ್‌ ಕ್ರೈಂ ನಿಗ್ರಹ ಮಂಡಳಿಗೆ ಭೇಟಿ ನೀಡಿ ಚರ್ಚಿಸಿದ ನಂತರ ನೀಟ್‌ ಪರೀಕ್ಷೆಯ ಹೊಸ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next