Advertisement

NEET Row: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್‌ ನಲ್ಲಿ ಸಿಬಿಐ ಶೋಧ ಕಾರ್ಯ

05:06 PM Jun 29, 2024 | Team Udayavani |

ನವದೆಹಲಿ: ನೀಟ್‌ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ಶನಿವಾರ (ಜೂನ್‌ 29) ಸಿಬಿಐ ಅಧಿಕಾರಿಗಳು ಪತ್ರಕರ್ತನನ್ನು ಬಂಧಿಸಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಮುರಿದ ಹಲ್ಲಿನಿಂದ ಪತ್ತೆ ಹಚ್ಚಿದ ತಂಗಿ

ಜಾರ್ಖಂಡ್‌ ನ ಹಝಾರಿಬಾಗ್‌ ನಲ್ಲಿ ಪತ್ರಕರ್ತ ಜಮಾಲುದ್ದೀನ್‌ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ಗುಜರಾತ್‌ ನ ಅಹಮದಾಬಾದ್‌, ಗೋಧ್ರಾ, ಖೇಡಾ ಸೇರಿದಂತೆ ಏಳು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 27ರಂದು ಸಿಬಿಐ ಬಿಹಾರದಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ಮೊದಲ ಬೇಟೆ ಆರಂಭಿಸಿತ್ತು. ಪಾಟ್ನಾದಲ್ಲಿ ಮನೀಶ್‌ ಪ್ರಕಾಶ್‌ ಮತ್ತು ಅಶುತೋಷ್‌ ಸೇರಿ ಇಬ್ಬರನ್ನು ಸಿಬಿಐ ಬಂಧಿಸಿತ್ತು.

ಮೇ 4ರಂದು ಮನೀಶ್‌ ಪ್ರಕಾಶ್‌, ಅಶುತೋಷ್‌ ನೆರವಿನೊಂದಿಗೆ ಅಭ್ಯರ್ಥಿಗಳಿಗೆ ಹುಡುಗರ ಹಾಸ್ಟೆಲ್‌ ನಲ್ಲಿ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದ. ಈ ಸಂದರ್ಭದಲ್ಲಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Advertisement

2024ರ ನೀಟ್‌ ಪರೀಕ್ ದೇಶದ 571 ನಗರಗಳ 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಸುಮಾರು 24 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಜೂನ್‌ 4ರಂದು ಫಲಿತಾಂಶ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next