Advertisement

Exam; ರದ್ದಾಗಿದ್ದ ನೀಟ್‌-ಪಿಜಿ ಆಗಸ್ಟ್‌ನಲ್ಲಿ ನಡೆಯುವ ಸಾಧ್ಯತೆ:ಅಭಿಜಿತ್‌ ಸೇಠ್

01:09 AM Jul 01, 2024 | Team Udayavani |

ಗೋಧ್ರಾ /ಹೊಸದಿಲ್ಲಿ: ಇತ್ತೀಚೆಗೆ ರದ್ದಾಗಿದ್ದ ನೀಟ್‌- ಪಿ.ಜಿ. ಪ್ರವೇಶ ಪರೀಕ್ಷೆ ಮುಂದಿನ ತಿಂಗಳು ನಡೆಯವ ಸಾಧ್ಯತೆಗಳು ಇವೆ. ಅದಕ್ಕೆ ಸಂಬಂಧಿಸಿದಂತೆ ಶೀಘ್ರವೇ ದಿನಾಂಕ ಹೊರಬೀಳಲಿದೆ ಎಂದು ಪರೀಕ್ಷಾ ಮಂಡಳಿ ಅಧ್ಯಕ್ಷ ಡಾ| ಅಭಿಜಿತ್‌ ಸೇಠ್ ತಿಳಿಸಿದ್ದಾರೆ. ಅಕ್ರಮ ನಡೆದ ಶಂಕೆ ಹಿನ್ನೆಲೆಯಲ್ಲಿ ಜೂ.22ರಂದು ನಡೆಯ ಬೇಕಾಗಿದ್ದ ನೀಟ್‌-ಪಿ.ಜಿ. ರದ್ದುಗೊಳಿಸಲಾಗಿತ್ತು.

Advertisement

ಸಿಬಿಐನಿಂದ ಶಾಲಾ ಮಾಲಕನ ಸೆರೆ: ನೀಟ್‌ ಅಕ್ರಮ ಆರೋಪಕ್ಕೆ ಸಂಬಂಧಿಸಿ ಗುಜರಾತ್‌ನ ಗೋಧ್ರಾದಲ್ಲಿ ಖಾಸಗಿ ಶಾಲೆಯ ಮಾಲಕ ದೀಕ್ಷಿತ್‌ ಪಟೇಲ್‌ ಎಂಬಾತನನ್ನು ಸಿಬಿಐ ಬಂಧಿಸಿದೆ. ಮೇ 5ರಂದು ನಡೆದಿದ್ದ ಪರೀಕ್ಷೆಯಲ್ಲಿ ಪಟೇಲ್‌ ಮಾಲಕತ್ವದ ಶಾಲೆಯಲ್ಲೂ ಪರೀಕ್ಷಾ ಕೇಂದ್ರವಿತ್ತು. ಅಕ್ರಮ ಆರೋಪದಲ್ಲಿ ಸಿಬಿಐ ಬಂಧಿಸಿದ 6ನೇ ವ್ಯಕ್ತಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next