Advertisement
ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮೂರು ದಿನಗಳವರಗೆ ಅಮಿತ ಶಾ ಪಕ್ಷದ ಬೂತ್ ಮಟ್ಟದ ಅನೇಕ ಸಭೆಗಳನ್ನು ನಡೆಸಲಿದ್ದಾರೆ. ಈ ವೇಳೆ ರೈತರು, ಕಾರ್ಮಿಕರೊಂದಿಗೆ ಚರ್ಚಿಸಲಿದ್ದಾರೆ. ನವಶಕ್ತಿ ಸಮಾವೇಶದ ಯಶಸ್ವಿಗೆ ಎಲ್ಲಾ ಸಿದ್ಧತೆಗಳು ನಡೆದಿವೆಎಂದು ತಿಳಿಸಿದರು.
ವೇದಿಕೆ ತೆರಳಿ ಸುರಪುರ-ಯಾದಗಿರಿ ಕ್ಷೇತ್ರಗಳ ಬೂತ್ ಮಟ್ಟದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಚುನಾವಣೆಯ ಕೆಲ ತಂತ್ರ ಮತ್ತು ಗೆಲುವಿನ ರೂಪರೇಷಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಮಾವೇಶದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಬಿಜೆಪಿ ಪ್ರಮುಖರು ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು. ನಂತರ ಅವರು ಯಾನಾಗುಂದಿಗೆ ತೆರಳಿ ಮಾತೆ ಮಾಣೀಕೇಶ್ವರಿಯ ದರ್ಶನ ಪಡೆಯುವರು. ಗುರುಮಠಕಲ್ ದಲ್ಲಿ ಟೋಕರಿ, ಕೂಲಿ ಕಬ್ಬಲಿಗ ಗಂಗಾಮತ ಸಮಾಜದ ಸಮಾವೇಶದಲ್ಲಿ ಪಾಲ್ಗೊಳ್ಳುವರು. ನಂತರ ಕಲಬುರಗಿಗೆ ತೆರಳುವರು. ಫೆ. 26ರಂದು ಕಲಬುರಗಿಯಲ್ಲಿ ಮೂರು ಜಿಲ್ಲೆಗಳ 19 ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶ ನಡೆಸಲಿದ್ದಾರೆ ಎಂದು ಹೇಳಿದರು.
Related Articles
Advertisement
ಬಿಜೆಪಿ ಜಯ ನಿಶ್ಚಿತ ಕೊಲೆ, ಭ್ರಷ್ಟಾಚಾರ, ಹಲ್ಲೆ ಸೇರಿದಂತೆ ಹಗರಣಗಳ ಸರಮಾಲೆ ಹೊತ್ತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ದುರಾಡಳಿತ ದಿಂದ ರಾಜ್ಯದ ಜನತೆ ರೋಸಿಹೋಗಿದೆ. ಕಾಂಗ್ರೆಸ್‌ನ್ನು ಕಿತ್ತು ಒಗೆಯಲು ರಾಜ್ಯದ ಜನತೆ ಸಂಕಲ್ಪ ಮಾಡಿದ್ದಾರೆ. ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಜನತೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಗೆಲುವು ನಿಶ್ವಿತ ಎಂದು ಎನ್. ಶಂಕ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.