Advertisement

ಅನಂತ್‌ಗೆ ಕೌಶಾಲಾಭಿವೃದ್ಧಿ:ಆಗುತ್ತಾ ಉತ್ತರ ಕನ್ನಡ ಅಭಿವೃದ್ಧಿ? 

03:59 PM Sep 03, 2017 | |

ಕಾರವಾರ : ಕಟ್ಟಾ ಹಿಂದುತ್ವದ ಪ್ರತಿಪಾದಕ ,ಉತ್ತರ ಕನ್ನಡದಿಂದ 5 ಬಾರಿ ಸಂಸದರಾಗಿ  ಆಯ್ಕೆಯಾದ  ಅನಂತ್‌ ಕುಮಾರ್‌ ಹೆಗಡೆ ಅವರು ಅನಿರೀಕ್ಷಿತವಾಗಿ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

Advertisement

ರಾಜ್ಯದಿಂದ ಸಚಿವ ಸ್ಥಾನದ ರೇಸ್‌ನಲ್ಲಿದ್ದ ಶೋಭಾ ಕರಂದ್ಲಾಜೆ, ಸುರೇಶ್‌ ಅಂಗಡಿ,ಪ್ರಹ್ಲಾದ್‌ ಜೋಷಿ ಅವರನ್ನು ಹಿಂದಿಕ್ಕಿ ಸಚಿವರಾಗಿ ಆಯ್ಕೆಯಾಗಿದ್ದಾರೆ. 

ಶಿರಸಿಯ 49 ರ ಹರೆಯದ ಅನಂತ ದತ್ತಾತ್ರೇಯ ಹೆಗಡೆ ಅವರು ಹವ್ಯಕ ಬ್ರಾಹ್ಮಣ ಸಮುದಾಯದ ಪ್ರಬಲ ನಾಯಕರು. 28 ನೇ ವಯಸ್ಸಿಗೆ ಸಂಸತ್‌ ಪ್ರವೇಶಿಸಿದ ಹಿರಿಮೆ ಅವರದ್ದಾಗಿದ್ದು  ಹಲವು ಆಕ್ರಮಣಕಾರಿ ಭಾಷಣಗಳ ಮೂಲಕ ಜನಪ್ರಿಯರಾಗಿದ್ದಾರೆ.

ಮೋದಿ ಅವರ ಸಂಪುಟದಲ್ಲಿ ರಾಜ್ಯ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅವರಿಗೆ ಕೌಶಲಾಭಿವೃದ್ಧಿ ಖಾತೆ ಸಿಕ್ಕಿದೆ. 

1996, 1998, 2004, 2009, 2014ರಲ್ಲಿ ಸಂಸತ್ತಿಗೆ ಆಯ್ಕೆ ಆಗಿರುವ ಅನಂತ್‌ ಕುಮಾರ್‌  ವಿದೇಶಾಂಗ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಹಾಲಿ ಸದಸ್ಯರಾಗಿದ್ದರು.

Advertisement

ಆರ್‌ಎಸ್‌ಎಸ್‌ನ ಬಲವಾದ ನಂಟು ಮತ್ತು ಭಾಷಣದ ಮೂಲಕ ಯುವ ಜನರನ್ನು ಸೆಳೆಯುವ ಸಾಮರ್ಥಯ ಹೊಂದಿರುವ ಕಾರಣ ಹೆಗಡೆ ಅವರನ್ನು ಬಿಜೆಪಿಯ ಭವಿಷ್ಯದ ನಾಯಕನನ್ನಾಗಿ ಬೆಳೆಸುವ ಯೋಚನೆ ಮೋದಿಯವರದ್ದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿ ಅವರ ಮೇಲೆ ವಿಶ್ವಾಸವಿರಿಸಿ ಕಳೆದ ಚುನಾವಣೆಯಲ್ಲಿ ಅನಂತ್‌ ಕುಮಾರ್‌ ಅವರನ್ನು ಉತ್ತರ ಕನ್ನಡ ಮತಕ್ಕೇತ್ರದ ಜನತೆ ಭಾರಿ ಮತಗಳಿಂದ ಗೆಲ್ಲಿಸಿದ್ದರು. ಇದೀಗ ಸಚಿವರಾಗಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜನತೆಯ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. 

Advertisement

Udayavani is now on Telegram. Click here to join our channel and stay updated with the latest news.

Next