Advertisement

ಲಸಿಕೆ ಸಂಗ್ರಹಕ್ಕೆ ನವ ವಿಧಾನ!

12:41 AM Nov 13, 2020 | mahesh |

ವಾಷಿಂಗ್ಟನ್‌: ಯಾವುದೇ ಲಸಿಕೆಗಳನ್ನು ಸಂಗ್ರಹಿಸಿ ಇಡುವಾಗ ಅಥವಾ ಸಾಗಿಸುವಾಗ ತಾಪಮಾನದಲ್ಲಿ ಏರಿಳಿಕೆಯಾದರೆ, ಅವು ಹಾಳಾಗುತ್ತವೆ. ಈ ಕಾರಣಕ್ಕಾಗಿಯೇ, ವಿಶ್ವಾದ್ಯಂತ ಪ್ರತಿವರ್ಷ ಲಕ್ಷಾಂತರ ಡೋಸ್‌ಗಳಷ್ಟು ಲಸಿಕೆಗಳು ವ್ಯರ್ಥವಾಗಿಬಿಡುತ್ತವೆ. ಈ ಸಮಸ್ಯೆಗೆ ಅಮೆರಿಕದ ಮಿಶಿಗನ್‌ ಟೆಕ್ನಾಲಜಿ ವಿವಿಯ ವಿಜ್ಞಾನಿಗಳು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಮಾರ್ಗವೊಂದನ್ನು ಅನ್ವೇಷಿಸಿದ್ದಾರೆ.

Advertisement

ಲಸಿಕೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು, ಸಾಗಿಸಲು ಸಾಮಾನ್ಯವಾಗಿ 2ರಿಂದ 8 ಡಿಗ್ರಿ ಸೆಲಿÏಯಸ್‌ನ ಅಗತ್ಯವಿರುತ್ತದೆ. ಆದರೆ, ಅರ್ಧಕ್ಕರ್ಧ ಲಸಿಕೆಗಳು ಹಾಳಾಗಿಬಿಡುತ್ತವೆ. ತಾಪಮಾನ ಅಧಿಕವಿದ್ದಾಗ ಅಥವಾ ಡೋಸ್‌ನ ದ್ರಾವಣದಲ್ಲಿ ಹೆಚ್ಚು ಸಡಿಲ ಜಾಗವಿದ್ದರೂ ಲಸಿಕೆಯಲ್ಲಿನ ವೈರಸ್‌ಗಳು ಮಡಿಕೆಗಳನ್ನು ತೆರೆದು ಹೊರಬರುತ್ತವೆ ಹಾಗಾದಾಗ ಲಸಿಕೆ ನಿರರ್ಥಕವಾಗುತ್ತದೆ. ಡೋಸ್‌ನಲ್ಲಿರುವ ದ್ರಾವಣವು ಸಡಿಲಗೊಳ್ಳದಂತೆ ಇಡು ವುದಕ್ಕಾಗಿ ಈಗ ವಿಜ್ಞಾನಿಗಳು ಸಿಂಥೆಟಿಕ್‌ ಪ್ರೊಟೀನ್‌ಗಳನ್ನು ಬಳಸಬಹುದು ಎನ್ನುವುದನ್ನು ಕಂಡುಕೊಂಡಿ ದ್ದಾರೆ.

ಈ ಸಿಂಥೆಂಟಿಕ್‌ ಪ್ರೊಟೀನುಗಳು ಲಸಿಕೆಯಲ್ಲಿನ ವೈರಸ್‌ಗಳಿಗೆ (ಹಾನಿಕಾರಕವಲ್ಲದ ವೈರಸ್‌) ರಕ್ಷಣಾತ್ಮಕ ಕವಚದಂತೆ ವರ್ತಿಸುತ್ತವೆ ಎನ್ನುತ್ತಾರೆ ಮಿಶಿಗನ್‌ ವಿವಿಯ ವಿಜ್ಞಾನಿಗಳು.

Advertisement

Udayavani is now on Telegram. Click here to join our channel and stay updated with the latest news.

Next