ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಹಾಗೂರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆ ಗಳನ್ನು ಮೆಚ್ಚಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರುಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿ ದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ತಿಳಿಸಿದರು.
ಜಿಲ್ಲೆಯ ಗುಡಿಬಂಡೆ ತಾಲೂಕಿನ ಬಿಜೆಪಿ ಬೆಂಬಲಿತ ಗ್ರಾಪಂನ ನೂತನಸದಸ್ಯರನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಅಭಿನಂದಿಸಿ ಮಾತನಾಡಿಅವರು, ನೂತನ ಗ್ರಾಪಂ ಸದಸ್ಯರುಗ್ರಾಮಾಭಿವೃದ್ಧಿ ವಿಚಾರದಲ್ಲಿ ವಿಶೇಷಕಾಳಜಿ ವಹಿಸಿ ಜನರ ಸಮಸ್ಯೆಗಳಿಗೆಸ್ಪಂದಿಸಿ ಕಾರ್ಯನಿರ್ವಹಿಸಬೇಕು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಯೋಜನೆಗಳ ಮೂಲಕಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರು.
ಗ್ರಾಪಂ ಚುನಾವಣೆಯಲ್ಲಿ ಎಲ್ಲೊಡುಪಂಚಾಯಿತಿಯಿಂದ ಶ್ರೀನಾಥ್,ಶಾಂತಮ್ಮ, ಹರೀಶ್‌ರೆಡ್ಡಿ, ಹರೀಶ್,ಶಿವಮ್ಮ, ಜಿ.ಎನ್.ಕೃಷ್ಣಾರೆಡ್ಡಿ, ಹಂಪಸಂದ್ರಪಂಚಾಯತಿ ಪೂರ್ಣಿಮಾ, ನಾಗರಾಜ್,ಸೊಮೇನಹಳ್ಳಿ ಪಂಚಾಯಿತಿ ಆಂಜನೇಯರೆಡ್ಡಿ, ವೆಂಕಟಲಕ್ಷಮ್ಮ, ಕಿರಣ್ ಕುಮಾರ್, ಎ.ಗೌತಮಿ, ಬೀಚಗಾನಹಳ್ಳಿಪಂಚಾಯಿತಿ ಶ್ರೀನಿವಾಸ್‌ಮೂರ್ತಿ,ದಪರ್ತಿ ಪಂಚಾಯಿತಿಯ ಲಕ್ಷ್ಮಮ್ಮಅವರನ್ನುಅಭಿನಂದಿಸಲಾಯಿತು.ಇದೇ ಸಂದರ್ಭದಲ್ಲಿ ಬೋಗೆನಹಳ್ಳಿಬಿ.ಎ. ಅರುಣ್‌ಕುಮಾರ್, ಬಿ.ವಿ.ಮುನಿರಾಜು, ಕಂಬಾಲಹಳ್ಳಿಯಕೆ.ಆರ್. ಆನಂದ್ ಬಿಜೆಪಿಗೆ ಸೇರ್ಪಡೆಯಾದರು.
ಪ್ರಧಾನ ಕಾರ್ಯದರ್ಶಿ ಮರಳಕುಂಟೆಕೃಷ್ಣಮೂರ್ತಿ, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ಪಾಲು ಮಂಜುನಾಥ್, ಗುಡಿಬಂಡೆ ಮಂಡಲ ಅಧ್ಯಕ್ಷ ಗಂಗರೆಡ್ಡಿ,ಪ್ರಧಾನ ಕಾರ್ಯದರ್ಶಿ ಮದನ್‌ಮೋಹನ್‌ರೆಡ್ಡಿ, ರೈತ ಮೋರ್ಚಾ ಮಾಜಿಜಿಲ್ಲಾಧ್ಯಕ್ಷ ರಾಮಣ್ಣ, ಲಕ್ಷ್ಮಿಪತಿ,ಅಶೋಕ್, ನರಸಪ್ಪ, ಮಂಜುನಾಥ್‌ಕನಕಶ್ರೀ, ಎಸ್‌ಆರ್‌ಎಸ್ ದೇವರಾಜ್, ವಿ.ಮಧುಚಂದ್ರ, ನಾಗಭೂಷಣ್‌ರೆಡ್ಡಿ,ರಾಜೇಶ್ ಜೈನ್, ಮನೋಜ್,ಮಧುರಾಮ್ ಮೂರ್ತಿ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.