Advertisement
ಈ ಹಿಂದೆ ಇದ್ದ ಔಷಧ ನಿಷ್ಪ್ರಯೋಜಕವಾಗಿದ್ದು, ಐಸಿ ಎಂಆರ್ ಹಾಗೂ ಹೈದರಾಬಾದಿನ ಸಂಸ್ಥೆ ಯೊಂದಿಗೆ ಒಡಂಬಡಿಕೆ ಮಾಡಿ ಹೊಸ ಔಷಧ ತಯಾರಿಗೆ ಸೂಚಿಸ ಲಾಗಿದ್ದು, ಅದಕ್ಕೆ 7-8 ತಿಂಗಳು ಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹೃದಯಾ ಘಾತ ಹೆಚ್ಚುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣ ಎನ್ನಲಾಗದು. ಈ ಬಗ್ಗೆ ಯಾವುದೇ ಸಂಶೋಧನ ವರದಿ ಇಲ್ಲ. ಹೃದಯಾಘಾತ ಮಾತ್ರ ವಲ್ಲದೆ ಕಿಡ್ನಿ ವೈಫಲ್ಯ, ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಇತ್ಯಾದಿ ಯುವ ಜನತೆಯಲ್ಲೂ ಹೆಚ್ಚಾಗಿದೆ. ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಯೂ ಕಾರಣ ಇರಬ ಹುದು. ಸದ್ಯ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.
Related Articles
ಸಚಿವರು ಅಜ್ಜರಕಾಡಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಕೆಎಫ್‌ಡಿ ಬಾಧಿತ ಜಿಲ್ಲೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ, ನಿಯಂತ್ರಣ ಹಾಗೂ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆಸೂಚಿ ಸಿದರು. ಕೆಎಫ್‌ಡಿ ಯಿಂದ ಸಾವನ್ನ ಪ್ಪದಂತೆ ನೋಡಿ ಕೊಳ್ಳಬೇಕು. ಕಾಯಿಲೆ ಹಬ್ಬಿರುವಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಮೇ ವರೆಗೂ ಹರಡುವ ಸಾಧ್ಯತೆಯಿದೆ. 3 ವಾರಗಳ ಬಳಿಕ ಶಿವಮೊಗ್ಗದಲ್ಲಿ ಪ್ರಗತಿ ಪರಿಶೀ ಲನೆ ನಡೆಸಲಾಗುವುದು ಎಂದರು.
Advertisement
48 ತಾಲೂಕು ಆಸ್ಪತ್ರೆ ಸುಧಾರಣೆಆರೋಗ್ಯ ಸಚಿವರು ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, 48 ಹೊಸ ತಾಲೂಕು ಆಸ್ಪತ್ರೆಗಳನ್ನು ಸುಧಾರಣೆ ಮಾಡ ಲಾಗುತ್ತಿದೆ. 25 ವರ್ಷ ಹಿಂದೆ ಆದ ತಾಲೂಕುಗಳ ಆಸ್ಪತ್ರೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಆ ಬಳಿಕ ಬೈಂದೂರು, ಬ್ರಹ್ಮಾವರದಂತಹ ಹೊಸ ತಾಲೂಕುಗಳ ಸಮುದಾಯ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲಾಗುವುದು. ಹೆರಿಗೆ ತಜ್ಞರಿಲ್ಲದ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಬೇಡಿಕೆ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಕರಾವಳಿಯಲ್ಲಿ ಖಾಸಗಿ ಕಾಲೇಜುಗಳಿವೆ. ಈಗ ಇರುವಂತಹ ಕಡೆಗಳಲ್ಲಿನ ಮೆಡಿಕಲ್ ಕಾಲೇಜುಗಳ ಸಮರ್ಪಕ ಬಳಕೆಗೆ ಒತ್ತು ನೀಡಲಾಗುವುದು ಎಂದ ಅವರು, ಆದ್ಯತೆ ಮೇರೆಗೆ ಜಿಲ್ಲಾಸ್ಪತ್ರೆಯಲ್ಲಿ ಎಪಿಎಲ್‌ನವರಿಗೆ ಶೇ. 30ರಷ್ಟು ಮಾತ್ರ ಉಚಿತವಿದ್ದು, ಬಾಕಿ ಪಾವತಿಸಬೇಕು ಎಂದು ತಿಳಿಸಿದರು. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಸಹಿತ ಸಿಬಂದಿ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದ ಲ್ಲಿಯೂ ಭರ್ತಿಗೆ ಸೂಚನೆ ನೀಡಲಾಗಿದೆ. 800 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೊಲ್ಲೂರಿನಂತಹ ಆಸ್ಪತ್ರೆ ಸಹಿತ ಕೆಲ ಪಿಎಚ್‌ಸಿಗಳಲ್ಲಿ 24 ಗಂಟೆ ಸೇವೆಗೆ ಎಲ್ಲ ಅಗತ್ಯ ಸೌಕರ್ಯ ಒದಗಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.