ಹೊಸದಿಲ್ಲಿ: ”ಪ್ರತಿಯೊಬ್ಬರೂ ಘನತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಬಹುದು” ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ಸಂಸತ್ತಿನ ಕಲಾಪದಲ್ಲಿ ಉಂಟಾಗುತ್ತಿರುವ ಅಡೆತಡೆಗಳ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡ ಅವರು ”ಇತ್ತೀಚಿನ ದಿನಗಳಲ್ಲಿ ಸಂಸತ್ತಿನ ಕಲಾಪಗಳನ್ನು ಹಾಳು ಮಾಡುತ್ತಿರುವ ಕೂಗು, ಹೆಸರು ಕರೆಯುವುದು ಮತ್ತು ಘೋಷಣೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
“ನಾನು ಅನಾರೋಗ್ಯದ ಹೊರತಾಗಿಯೂ ಸಂಸತ್ತಿಗೆ ಹಾಜರಾಗಲು ಬಂದಿದ್ದೇನೆ, ಆದರೆ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಸುದೀರ್ಘ ಅನುಭವದಿಂದ ನಾನು ಹೇಳುತ್ತೇನೆ. ಪ್ರತಿಯೊಬ್ಬರೂ ಘನತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಬಹುದು ”ಎಂದು X(ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕೂಗುವುದು, ಹೆಸರು ಕರೆಯುವುದು, ಘೋಷಣೆ ಮೊಳಗಿಸುವುದು ನಮ್ಮ ವ್ಯವಸ್ಥೆಯಲ್ಲಿ ಉಳಿದಿರುವುದನ್ನು ನಾಶಪಡಿಸುತ್ತದೆ.” ಎಂದು ಅಸಮಾಧಾನ ಹೊರ ಹಾಕಿದ್ದಾರೆ.