Advertisement
ಏನೆಲ್ಲ ಇದೆ?ಮಕ್ಕಳಿಗೆ ಆಡಲು ಜಾರು ಬಂಡಿ, ಕುಳಿತುಕೊಳ್ಳಲು ಉಯ್ನಾಲೆ, ಕಲ್ಲಿನ ಆಸನ, ತಗಡು ಶೀಟಿನ ಮೇಲ್ಛಾವಣಿ, ಸುತ್ತ ಹಸುರು ಕಂಗೊಳಿಸುವ ಸಲುವಾಗಿ ಸಸಿ ಪೋಷಣೆಗೆ ವ್ಯವಸ್ಥೆ ಮಾಡಿದ್ದಾರೆ. ಬೀಚ್‌ಗೆ ಒಳ ಬರುವ ಪ್ರದೇಶದಲ್ಲಿ ಗೋಪುರ ವ್ಯವಸ್ಥೆ, ಸ್ಥಳೀಯರು ಇಲ್ಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದರೆ ಅದಕ್ಕಾಗಿ ಒಂದು ಕಲ್ಲು ಬೆಂಚು, ಪಾರ್ಟಿ ಮಾಡಲು ಸ್ಥಳ ಮೀಸಲು ಇಡಲಾಗಿದೆ. ಇನ್ನೊಂದು ವಿಶೇಷ ಎಂದರೆ ಇಲ್ಲಿ ನಿರ್ಮಿಸಲಾದ ಉಡಾವಣೆಗೆ ಸಿದ್ಧಗೊಂಡಿರುವ ಪಿಎಸ್ ಎಲ್‌ವಿ ರಾಕೆಟ್ ಮಾದರಿ ಗಮನ ಸೆಳೆಯುತ್ತಿದೆ. ಅಲ್ಲದೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಶನಿ ವಾರ ಹೊಸ ರೂಪ ಪಡೆದ ಬೀಚ್‌ನಲ್ಲಿರುವ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಇಡ್ಯಾ ಬೀಚ್ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಜತೆ ಚರ್ಚಿಸಿ ಅನುದಾನ ತರಲು ಯೋಜನೆ ರೂಪಿಸಲಾಗುವುದು. ಬೀಚ್‌ಗೆ ಕುಟುಂಬ ಸಮೇತ ಆಗಮಿಸಿ ಒಂದಿಷ್ಟು ಕಾಲ ಕಳೆದು ಸಂತಸದಿಂದ ತೆರಳುತ್ತಾರೆ. ಇಲ್ಲಿಯ ಸ್ಥಳೀಯ ಯುವಕರು ಕೊರೊನಾ ಸಂದರ್ಭ ಲಾಕ್‌ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಇತರರಿಗೂ ಸಂತಸವಾಗುವಂತಹ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಮೇಯರ್ ದಿವಾಕರ್, ಉಪಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ನಯನಾ ಆರ್. ಕೋಟ್ಯಾನ್, ಬಿಜೆಪಿ ಕಾರ್ಪೊರೇಟರ್‌ಗಳು, ಸ್ಥಳೀಯ ಮುಖಂಡರು, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.