Advertisement

ಸಂಡೇ ಮಾರುಕಟ್ಟೆಗೆ ಹೊಸಕಳೆ

02:05 PM Aug 20, 2019 | Team Udayavani |

ಬಳ್ಳಾರಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಿಂದ ನಿರ್ಮಿಸಿ ಕಳೆದ ಎರಡು ವರ್ಷಗಳಿಂದ ಬಳಕೆಯಾಗದೇ ಇರುವ ಭಾನುವಾರದ ಮಾರುಕಟ್ಟೆಗೆ ಶೀಘ್ರದಲ್ಲೇ ಚಾಲನೆ ದೊರೆಯುವ ಸಾಧ್ಯತೆಯಿದೆ.

Advertisement

ನಗರದ ತೇರು ಬೀದಿಯ ದೊಡ್ಡ ಮಾರುಕಟ್ಟೆಯಲ್ಲಿದ್ದ ತರಕಾರಿ ಸಗಟು ವ್ಯಾಪಾರಿಗಳನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಆದರೆ, ಸಗಟು ವ್ಯಾಪಾರಸ್ಥರ ಜೊತೆಗೆ ಚಿಲ್ಲರೆ ಮಾರಾಟಗಾರರು ಸಹ ಎಪಿಎಂಸಿಗೆ ಸ್ಥಳಾಂತರವಾಗಿ ವಹಿವಾಟು ಆರಂಭಿಸಿದ್ದರು. ಇವರೆಲ್ಲ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರಿಂದ ಚಿಲ್ಲರೆ ಮಾರಾಟಗಾರರಿಗೆ ಬಿಸಿಲು ಮಳೆಯ ಸಂಕಷ್ಟವೂ ಎದುರಾಗಿತ್ತು. ಮಳೆ ಬಂದರೆ ಮಾರುಕಟ್ಟೆಯಲ್ಲಿ ಓಡಾಡುವುದು ಕಷ್ಟಕರವಾಗಿತ್ತು. ಜೊತೆಗೆ ರಸ್ತೆಯಲ್ಲಿ ಗ್ರಾಹಕರು ಮತ್ತು ವಾಹನಗಳ ಓಡಾಟದಿಂದ ಕಿರಿ ಕಿರಿಯಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗಾಗಿ ರೈತರೇ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರು ಪ್ರತಿಭಾನುವಾರ ಮಾರುಕಟ್ಟೆಗೆ ತಂದು ಉತ್ಪನ್ನಗಳನ್ನು ಯಾವುದೇ ಕಮೀಷನ್‌ ತೆರಿಗೆ ಇಲ್ಲದೆ ಮಾರಾಟ ಮಾಡುವ ಸಲುವಾಗಿ ಭಾನುವಾರ ಸಂತೆ ಮಾರುಕಟ್ಟೆ ಪ್ರಾಂಗಣವನ್ನು ನಿರ್ಮಿಸಲಾಗಿತ್ತು. ಆದರೆ ಇಲ್ಲಿ ರೈತರಾರು ಬಂದು ಮಾರಾಟ ಮಾಡುತ್ತಿಲ್ಲ.

ಚಿಲ್ಲರೆ ಮಾರಾಟಗಾರರು ಭಾನುವಾರದ ಸಂತೆ ಮಾರುಕಟ್ಟೆಗೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಅವರು ಒಪ್ಪಿರಲಿಲ್ಲ. ಸಗಟು ವ್ಯಾಪಾರಿಗಳೇ ದಡೆ (ಮೂರು ಕೆಜಿ) ಲೆಕ್ಕದಲ್ಲಿ ಮಾರುತ್ತಿರುವುದರಿಂದ ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರು ಬರಲ್ಲ ಎಂದು ಭಾನುವಾರ ಸಂತೆ ಪ್ರಾಂಗಣಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಇದೀಗ ಮಧ್ಯ ಪ್ರವೇಶಿಸಿದ ಶಾಸಕ ಜಿ.ಸೋಮಶೇಖರರೆಡ್ಡಿ, ಎಪಿಎಂಸಿ ಕಾರ್ಯದರ್ಶಿ, ಸದಸ್ಯ ಪಾಲನ್ನ ಅವರುಗಳು ಚಿಲ್ಲರೆ ಮಾರಾಟಗಾರರೊಂದಿಗೆ ಮಾರುಕತೆ ನಡೆಸಿ ಸಗಟು ವ್ಯಾಪಾರಿಗಳು ಇನ್ನು ಮುಂದೆ ದಡೆ ಲೆಕ್ಕದಲ್ಲಿ ಮಾರಾಟ ಮಾಡಬಾರದು ಎಂದು ಚಿಲ್ಲರೆ ಮಾರಾಟಗಾರರು ಸಂಡೆ ಮಾರುಕಟ್ಟೆ ಪ್ರಾಂಗಣಕ್ಕೆ ತೆರಳಬೇಕೆಂದು ಮನವೊಲಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಇದರಿಂದ ಇನ್ನು ಮುಂದೆ ಬಿಕೋ ಎನ್ನುತ್ತಿದ್ದ ಭಾನುವಾರದ ಸಂಡೆ ಮಾರುಕಟ್ಟೆಗೆ ಹೊಸಕಳೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next