Advertisement

ಮೂರು ತಿಂಗಳೊಳಗೆ `108′ ಆರೋಗ್ಯ ಸೇವೆಗೆ ಹೊಸ ರೂಪ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

10:13 PM Jun 17, 2023 | Team Udayavani |

ಬೆಂಗಳೂರು: ಮುಂದಿನ ಮೂರು ತಿಂಗಳೊಳಗಾಗಿ 108 ಆರೋಗ್ಯ ಸೇವೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶನಿವಾರ ಮಾಗಡಿ ಆರೋಗ್ಯಸೌಧದಲ್ಲಿ ನಡೆದ 108 ಆರೋಗ್ಯ ಸೇವೆಯ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. 90 ದಿನಗಳೊಳಗೆ ಆ್ಯಂಬುಲೆನ್ಸ್‌ ಸೇವೆಯಲ್ಲಿ ಉತ್ತಮ ಫ‌ಲಿತಾಂಶ ಬೇಕು. ಸಾರ್ವಜನಿಕರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಹನ ಸೇವೆ ಪಡೆಯಲು ಪರಿತಪಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

108 ಆರೋಗ್ಯ ಸೇವೆಯ ಕಾಲ್‌ ಸೆಂಟರ್‌ನ ತಂತ್ರಜ್ಞಾನ ಮಾಹಿತಿ ಪಡೆದುಕೊಂಡು, ತಂತ್ರಜ್ಞಾನದಲ್ಲಿ ಅಗತ್ಯ ಬದಲಾವಣೆ ತರಲು ಸೂಚಿಸಿದರು. ಸೇವೆ ಪಡೆಯಲು ಸಾರ್ವಜನಿಕರ ಕರೆಗಳಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇದಕ್ಕೆ ಕಾರಣವಾಗುವ ಅಂಶ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

2017ರ ಬಳಿಕ 108 ಆರೋಗ್ಯ ವಾಹಿನಿ ಹೊಸ ಟೆಂಡರ್‌ ಕರೆದಿಲ್ಲ. ಹಿಂದೆ ಗುತ್ತಿಗೆ ಪಡೆದವರು ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಮರ್ಪಕವಾಗಿ 108 ಆರೋಗ್ಯ ವಾಹಿನಿ ಸೇವೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next