Advertisement

ಭಾರತೀಯ ಕ್ರಿಕೆಟ್‌ ಜೆರ್ಸಿಗೆ ನೂತನ ಪ್ರಾಯೋಜಕರು

11:58 PM Jan 02, 2023 | Team Udayavani |

ಮುಂಬಯಿ: ನೂತನ ವರ್ಷದಲ್ಲಿ ಭಾರತೀಯ ಕ್ರಿಕೆಟಿಗರ ಜೆರ್ಸಿಗೆ ನೂತನ ಪ್ರಾಯೋಜಕರು ಲಭಿಸಿದ್ದಾರೆ. ಎಂಪಿಎಲ್‌ ಬದಲು ಕಿಲ್ಲರ್‌ ಬ್ರ್ಯಾಂಡ್‌ ಹೆಸರು ಕಾಣಿಸಿಕೊಂಡಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಈ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.

Advertisement

ಕಳೆದ ಟಿ20 ವಿಶ್ವಕಪ್‌ ವೇಳೆ ಧರಿಸಿದ ಜೆರ್ಸಿಯನ್ನೇ ಮುಂದುವರಿಸಲಾಗಿದೆಯಾದರೂ ಇದರ ಪ್ರಾಯೋಜಕತ್ವದಲ್ಲಿ ಬದಲಾವಣೆ ಸಂಭವಿಸಿದೆ.

ಇನ್ನೊಂದು ವರ್ಷದ ಒಪ್ಪಂದದ ಅವಧಿ ಬಾಕಿ ಇರುವಂತೆಯೇ “ಎಂಪಿಎಲ್‌’ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಇದರ ಬದಲು “ಕಿಲ್ಲರ್‌ ಬ್ರ್ಯಾಂಡ್‌’ ಕಂಪೆನಿಯ ಸ್ಪಾನ್ಸರ್‌ಶಿಪ್‌ ಲಭಿಸಿದೆ. ಹೀಗಾಗಿ ಕ್ರಿಕೆಟಿಗರ ಅಂಗಿಯ ಮೇಲಿದ್ದ ಎಂಪಿಎಲ್‌ ಲೋಗೋ ಬದಲು ಕಿಲ್ಲರ್‌ ಬ್ರ್ಯಾಂಡ್‌ ಲೋಗೋ ಮೂಡಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next