ಕೋಟ: ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಗಳಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲಿಸುವ ತಂತ್ರಗಾರಿಕೆ ರೂಪುಗೊಳ್ಳುತ್ತಿದೆ. ಈ ಕಾಲಘಟ್ಟದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ಮಣಿಪಾಲ ಟೆಕ್ನಾ ಲಜೀಸ್ ಲಿ.ನ ಆಡಳಿತ ನಿರ್ದೇಶಕ ಟಿ. ಗೌತಮ್ ಎಸ್. ಪೈ. ಹೇಳಿದರು.
ಅವರು ಸಾಲಿಗ್ರಾಮ ನ್ಯೂ ಕಾರ್ಕಡ ಹಿ.ಪ್ರಾ. ಶಾಲೆಗೆ ದಾನಿಗಳು ಕೊಡ ಮಾಡಿದ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.ಸ್ಮಾರ್ಟ್ ಕ್ಲಾಸ್ ಉಪಕರಣ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ, ಬದ ಲಾವಣೆಗೆ ತೊಡಗಿಸಿಕೊಳ್ಳುವಂತೆ ಮಾಡು ತ್ತದೆ ಎಂದರು.
ಅಧ್ಯಕ್ಷತೆ ವಹಿ ಸಿದ್ದ ಡಾ| ಟಿ.ಎಂ.ಎ. ಪೈ ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಡಾ| ಮಹಾಬಲೇಶ್ವರ ರಾವ್ ಮಾತನಾಡಿ, ಆಂಗ್ಲಮಾಧ್ಯಮದ ಹೊಡೆತಕ್ಕೆ ಸಿಲುಕಿ ಕನ್ನಡ ಶಾಲೆಗಳು ತತ್ತರಗೊಂಡಿವೆ. ಆದರೆ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಸಮಗ್ರ ಜ್ಞಾನವನ್ನು ಹೊಂದಿರುತ್ತಾರೆ ಎಂದರು.
ಈ ಸಂದರ್ಭ ದಾನಿಗಳಾದ ವಂಡಾರು ಚಿತ್ತಾರ ಕ್ಯಾಶ್ಯೂಸ್ ಮಾಲಕ, ಉದ್ಯಮಿ ಡಿ. ಗೋಪಿನಾಥ ಕಾಮತ್ ಅವರು ಗಣಕ ವಿಜ್ಞಾನ ಕೊಠಡಿ ಉದ್ಘಾ ಟನೆ ಗೈದರು ಹಾಗೂ ದಾನಿ ಗಳು ಕೊಡ ಮಾಡಿದ ಸಮವಸ್ತ್ರ ವಿತರಣೆ, ಶಾಲಾ ದಿನಚರಿ ಪುಸ್ತಕ ಬಿಡು ಗಡೆ, ಗುರುತು ಚೀಟಿ ಹಂಚಿಕೆ ನಡೆ ಯಿತು. ಸೆಲ್ಕೋ ಸೋಲಾರ್ ಹಾಗೂ ಮೆಂಡೋ ಫೌಂಡೇಶನ್ ಸ್ಮಾರ್ಟ್ ಕ್ಲಾಸ್ ಅಳವಡಿಕೆಗೆ ಸಹಕಾರ ನೀಡಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಉಡುಪಿ ಜಿಲ್ಲಾ ಅಕ್ಷರದಾಸೋಹ ನಿರ್ದೇ ಶಕ ರಾದ ಬಿ. ನಾಗೇಶ ಶ್ಯಾನು ಭಾಗ್, ಉಡುಪಿ ಬಾಳಿಗ ಫಿಶ್‌ನೆಟ್‌ನ ಶಶಿಧರ ಕೆ. ಬಾಳಿಗ, ಬ್ರಹ್ಮಾವರ ಮಹೇಶ ಆಸ್ಪತ್ರೆಯ ಮುಖ್ಯಸ್ಥ ಡಾ| ರಾಕೇಶ ಅಡಿಗ, ಸಿ.ಆರ್.ಪಿ. ಪದ್ಮಾಜಾ, ರೋಟರಿಕ್ಲಬ್ ಕೋಟ- ಸಾಲಿಗ್ರಾಮದ ಅಧ್ಯಕ್ಷ ವ್ಯಾಸರಾಯ್ ಆಚಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ಶೇಖರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಕಾಮತ್, ಸಾಲಿಗ್ರಾಮ ಪ.ಪಂ. ಸದಸ್ಯ ಸಂಜೀವ ದೇವಾಡಿಗ, ಶಾಲಾ ನಾಯಕಿ ತ್ರಿಷಾ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಸ್ವಾಗತಿಸಿ, ಶಿಕ್ಷಕ ನಾರಾಯಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ರತ್ನಾಕರ ಶೆಟ್ಟಿ ವಂದಿಸಿದರು.