Advertisement
ಆದರೆ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದ್ದರೂ, ಕಳೆದ ಎರಡು ವಾರಗಳಿಂದ ಯಾವುದೇ ಸಿನಿಮಾಗಳು ಬಿಡುಗಡೆ ಆಗದಿದ್ದರಿಂದ, ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ ಒಂದು ರೀತಿಯ ಅಘೋಷಿತ ಲಾಕ್‌ಡೌನ್ ಇನ್ನೂ ಮುಂದುವರೆದಂತಿದೆ.
Related Articles
Advertisement
ಉತ್ತರಕರ್ನಾಟಕ ಮೂಲದ ಏಕಲವ್ಯ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರ ಹೊಂದಿರುವಈ ಚಿತ್ರದಲ್ಲಿ ಪಾವನಗೌಡ, ಚಿರಶ್ರೀ ಅಂಚನ್ ನಾಯಕಿಯಾಗಿ ಅಭಿನಯಿಸಿದ್ದಾರೆ. .ಒಟ್ಟಾರೆ ಹೊಸಬರ “ಕಲಿವೀರ’ ಥಿಯೇಟರ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಉಲಾ ಪಲ್ಟಾ ಆಗುತ್ತಾ ಲೆಕ್ಕಾಚಾರ?
ಆಗಸ್ಟ್ ಮೊದಲ ವಾರದಿಂದ ರಾಜ್ಯದಲ್ಲಿ ಥಿಯೇಟರ್‌ಗಳಲ್ಲಿ 100%ರಷ್ಟು ಪ್ರೇಕ್ಷಕರ ಪ್ರವೇಶಾವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರರಂಗದ ಬಹುತೇಕ ನಿರ್ಮಾಪಕರು ಮತ್ತು ಪ್ರದರ್ಶಕರಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿರುವುದರಿಂದ, ಕೋವಿಡ್ ಮೂರನೇ ಅಲೆಯ ಆತಂಕದಿಂದ ಸರ್ಕಾರ ಥಿಯೇಟರ್‌ಗಳಲ್ಲಿ 100%ರಷ್ಟು ಪ್ರೇಕ್ಷಕರ ಪ್ರವೇಶಾವಕಾಶ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಹೀಗಾಗಿ ಇನ್ನೂ ಎರಡು – ಮೂರು ವಾರ ಈಗಿರುವಂತೆಯೇ 50% ರಷ್ಟು ಪ್ರೇಕ್ಷಕರ ಪ್ರವೇಶದೊಂದಿಗೆ ನಿರ್ಬಂಧಿತ ಪ್ರವೇಶ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ಆಗಸ್ಟ್ ಮೊದಲ ವಾರ, ಎರಡನೇ ವಾರ ತಮ್ಮ ಬಿಡುಗಡೆ ಅನೌನ್ಸ್ ಮಾಡುವ ಯೋಚನೆಯಲ್ಲಿದ್ದ ಅನೇಕ ನಿರ್ಮಾಪಕರು ಇನ್ನೂಕೆಲವು ದಿನಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ. ಇದರ ಜೊತೆಗೆ ಮತ್ತೂಂದು ಬಿಗ್ ಸ್ಟಾರ್ ಚಿತ್ರ “ಕೋಟಿಗೊಬ್ಬ-3′ ಸುದೀಪ್ ಬರ್ತ್‌ಡೇ ಪ್ರಯುಕ್ತ ಸೆ.2ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.