Advertisement

ಜಾಲಾಡಿಗೆ ಹೊಸ ಕಿಂಡಿ ಅಣೆಕಟ್ಟು ಮಂಜೂರು: ಸುಕುಮಾರ ಶೆಟ್ಟಿ

07:21 PM Jan 28, 2019 | Harsha Rao |

ಹೆಮ್ಮಾಡಿ: ಕಟ್‌ಬೆಲೂ¤ರು ಹಾಗೂ ಹೆಮ್ಮಾಡಿ ಗ್ರಾಮಗಳ ನೂರಾರು ಎಕ್ರೆ ಕೃಷಿ ಪ್ರದೇಶಕ್ಕೆ ವರದಾನವಾಗುವ ಸಲುವಾಗಿ ಜಾಲಾಡಿಗೆ 50 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟು ಮಂಜೂರಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

ಕೃಷಿಕರಿಗೆ ಸಮಸ್ಯೆ
ಜಾಲಾಡಿ, ಹೊಸಕಳಿಯ ನೂರಾರು ಎಕ್ರೆ ಕೃಷಿ ಪ್ರದೇಶಕ್ಕೆ ಉಪ್ಪು ನೀರು ಬಾರದಂತೆ ತಡೆಯುವಲ್ಲಿ ಅನುಕೂಲವಾಗಿದ್ದ ಜಾಲಾಡಿಯ ಕಿಂಡಿ ಅಣೆಕಟ್ಟು ರವಿವಾರ ಕುಸಿದು ಬಿದ್ದಿದೆ. ಪರಿಣಾಮ  ಕೃಷಿ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದ್ದು, ಕೃಷಿಕರಿಗೆ ಸಮಸ್ಯೆಯಾಗಿದೆ.

ಈ ಬಗ್ಗೆ ಪತ್ರಿಕೆಯಲ್ಲಿ  ಜ. 28ರಂದು ವರದಿ ಪ್ರಕಟಗೊಂಡಿತ್ತು.  ಜಾಲಾಡಿಗೆ ದೊಡ್ಡ ಕಿಂಡಿ ಅಣೆಕಟ್ಟು ಬೇಕು ಎನ್ನುವ ಕೃಷಿಕರ ಮನವಿಗೆ ಸ್ಪಂದಿಸಿ, 50 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಟೆಂಡರ್‌ ಬಾಕಿ ಇದ್ದು, ಅದಾದ ಕೂಡಲೇ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ. 

ತಾತ್ಕಾಲಿಕ ತಡೆ
ಈಗ ರೈತರೆಲ್ಲ ಸೇರಿ ಮಣ್ಣಿನ ಚೀಲಗಳನ್ನು ಇಟ್ಟು ಉಪ್ಪು ನೀರು ಕೃಷಿ ಪ್ರದೇಶಕ್ಕೆ ನುಗ್ಗದಂತೆ ತಾತ್ಕಾಲಿಕವಾಗಿ ತಡೆಯಲಾಗಿದೆ. ಆದರೆ ಇದು ಹೆಚ್ಚು ದಿನ ಉಳಿಯುವುದು ಕಷ್ಟ. ಇದರಿಂದ ಉಪ್ಪು ನೀರು ಕೃಷಿ ಭೂಮಿಗೆೆ ಯಾವಾಗ ನುಗ್ಗುತ್ತದೋ ಎಂಬ ಆತಂಕದಲ್ಲೇ ಕೃಷಿಕರು ದಿನ ಕಳೆಯುವಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next