Advertisement

ಅಂಟಾರ್ಟಿಕಾ ಬಳಿ ಹೊಸ ದ್ವೀಪ ಪತ್ತೆ

10:45 AM Aug 29, 2021 | Team Udayavani |

ನವದೆಹಲಿ: ಭೂಮಿಯ ಉತ್ತರ ಭಾಗದ ಕಟ್ಟಕಡೆಯ ಭೂಭಾಗ ಎಂದೆನಿಸಿರುವ ಗ್ರೀನ್‌ ಲ್ಯಾಂಡ್‌ ನಂತರವೂ ಇರುವ ಮತ್ತೂಂದು ಸಣ್ಣ ದ್ವೀಪವೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

Advertisement

ಭೂಗೋಳದ ನಡುನೆತ್ತಿಯ ಸಮೀಪದಲ್ಲಿರುವ ಈ ದ್ವೀಪದ ಕುರಿತಂತೆ ಮಾಹಿತಿ ನೀಡಿರುವ ಸಂಶೋಧಕರ ತಂಡದಲ್ಲಿದ್ದ ಕೋಪೆನ್‌ ಹೇಗ್‌ ವಿಶ್ವವಿದ್ಯಾಲಯದ ಸಿಬ್ಬಂದಿ ಮಾರ್ಟೆನ್‌ ರ್ಯಾಶ್‌, “”ಅಗಾಧ ಮಂಜಿನಿಂದ ಆವೃತವಾಗಿರುವ ಈ ದ್ವೀಪವನ್ನು ನಾವು ಜುಲೈನಲ್ಲೇ ಪತ್ತೆ ಹಚ್ಚಿದ್ದೆವು. ಹೆಪ್ಪುಗಟ್ಟಿದ ಆರ್ಕ್‌ಟಿಕ್‌ ಸಮುದ್ರದಲ್ಲಿ ಪಯಣಿಸುತ್ತಿದ್ದ ನಮಗೆ ಆ ದ್ವೀಪವನ್ನು ಕಂಡಾಕ್ಷಣ, ಗ್ರೀನ್‌ ಲ್ಯಾಂಡ್‌ ನ ಉತ್ತರ ಭಾಗದ ಕಟ್ಟಕಡೆಯ ತಾಣವಾದ ಕೂಡಾಕ್‌ ಅನ್ನು ತಲುಪಿದ್ದೇವೆ ಎಂದೆನಿಸಿತ್ತು. ಆದರೆ, ಅದು ಹೊಸ ದ್ವೀಪ ಎಂಬುದು ಆನಂತರ ತಿಳಿಯಿತು. ಈ ದ್ವೀಪ 98 ಅಡಿ ಅಗಲವಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಭವಿನಾ ಪಟೇಲ್ ಎಂಬ ಸಾಧಕಿ: “ಕಂಪ್ಯೂಟರ್‌ ಕಲಿಯಲು ತೆರಳಿದ್ದಾಗ ಟಿಟಿ ಗುಂಗು ಹತ್ತಿತು’

Advertisement

Udayavani is now on Telegram. Click here to join our channel and stay updated with the latest news.

Next