Advertisement

ಡಿಸೆಂಬರ್‌ ನಲ್ಲಿ ಹೊಸ ಕೈಗಾರಿಕಾ ನೀತಿ ಜಾರಿ: ಸಚಿವ ಜಗದೀಶ್‌ ಶೆಟ್ಟರ್‌

10:09 AM Nov 01, 2019 | Sriram |

ಬೆಂಗಳೂರು: ಕೈಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲು ಪೂರಕವಾಗುವ ಹೊಸ ಕೈಗಾರಿಕಾ ನೀತಿಯ ಕರಡು ಸಿದ್ದವಾಗಿದ್ದು ಡಿಸೆಂಬರ್‌ ನಿಂದ ಜಾರಿಗೆ ತರಲಿದ್ದೇವೆ ಎಂದು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

Advertisement

ಬುಧವಾರ ನಗರದ ಖನಿಜ ಭವನದಲ್ಲಿ ಮಾತನಾಡಿದ ಅವರು, 2014-19ರವರೆಗಿನ ಕೈಗಾರಿಕಾ ನೀತಿ ಅವಧಿ ಮುಗಿದಿದೆ. ಹೀಗಾಗಿ ಹೊಸ ನೀತಿ ಸಿದ್ಧಪಡಿಸುವ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ. ಈ ಸಂಬಂಧ ಕಾಸಿಯಾ, ಎಫ್‌ ಕೆ ಸಿಸಿಐ ಸಹಿತವಾಗಿ ವಿವಿಧ ಸಂಘಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದೇವೆ. ನೀತಿಯ ಕರಡು ಸಿದ್ದವಾಗಿರುವುದರಿಂದ ಅಧಿಕಾರಿಗಳ ಜೊತೆಗೆ ಇನ್ನೊಮ್ಮೆ ಮಾತುಕತೆ ನಡೆಸಿ ಅಂತಿಮಗೊಳಿಸಲಿದ್ದೇವೆ. ಡಿಸೆಂಬರ್‌ ನಿಂದ ಹೊಸ ಕೈಗಾರಿಕಾ ನೀತಿ ಜಾರಿಗೆ ಬರಲಿದೆ ಎಂದರು.

ಹೊಸ ಕೈಗಾರಿಕಾ ರೀತಿಯಲ್ಲಿ ಬೆಂಗಳೂರು ಹೊರತುಪಡಿಸಿ ಎರಡು ಮತ್ತು ಮೂರನೇ ಹಂತದ ಸಿಟಿಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ಭೂಸ್ವಾದೀನ ಪ್ರಕ್ರಿಯೆ ಸೇರಿದಂತೆ ಅನೇಕ ಅಂಶಗಳನ್ನು ಸೇರಿಸಲಾಗಿದೆ. ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರಗಳ ಮೂಲಕ ಕೈಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದರು.

ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳು ಇರುವ ಬಗ್ಗೆ ಕೆಲವೊಂದು ಪ್ರಕರಣಗಳು ಗಮನಕ್ಕೆ ಬಂದಿವೆ. ಎಸಿಬಿ ದಾಳಿಯಾಗಿರುವ ಬಗ್ಗೆಯೂ ಮಾಹಿತಿ ಇದೆ. ಕೆಲವು ಅಧಿಕಾರಿಗಳ ಮೇಲೆ ಆರೋಪ ಬಂದಿದೆ. ಇದರ ಬಗ್ಗೆ ಶೀಘ್ರವೇ ಕ್ರಮತೆಗೆದುಕೊಳ್ಳಲಿದ್ದೇವೆ ಎಂದರು.

ಆರ್ಥಿಕ ಹಿಂಜರಿತದಿಂದ ಎಲ್ಲ ಕೈಗಾರಿಕೆ ಮೇಲೆ ಪರಿಣಾಮ ಬೀರಿಲ್ಲ. ಅಟೋಮೊಬೈಲ್‌ ಮತ್ತು ಕೆಲುವು ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ರಿಯಲ್‌ ಎಸ್ಟೇಟ್‌ ಮೇಲೆ ಪರಿಣಾಮ ಬೀರಿದೆ. ಈಗ ಆರ್ಥಿಕ ಸುಧಾರಣೆಯಾಗುತ್ತಿದ್ದು, ಬೇರೆ ಯಾವುದೇ ಕೈಗಾರಿಕೆಗಳ ಮೇಲೆ ಪರಿಣಾಮ ಬಿದ್ದಿಲ್ಲ ಎಂದು ಕೈಗಾರಿಕೆಗಳ ಮೇಲೆ ಆಗಿರುವ ಆರ್ಥಿಕ ಹಿಂಜರಿತದ ಪರಿಣಾಮವನ್ನು ಒಪ್ಪಿಕೊಂಡರು.

Advertisement

ಪ್ರವಾಹ ಸಂತ್ರಸ್ಥರ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚು ಗಮನಹರಿಸಿದೆ. ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿಲ್ಲ. ಎನಿxಆರ್‌ಎಫ್‌ ನಿಯಮ ಸಡಿಲ ಮಾಡಿ, ಒಂದು ಲಕ್ಷ ಜನರಿಗೆ 10 ಸಾವಿರ ಪರಿಹಾರ ನೀಡಿದ್ದೇವೆ. 5 ಲಕ್ಷದವರೆಗೆ ಮನೆ ಕಟ್ಟಿಸಲು ನೆರವು ಘೋಷಿಸಿದ್ದೇವೆ.

ಸಂತ್ರಸ್ಥರ ಪರಿಹಾರ ಕಾರ್ಯದಲ್ಲಿ ಸರ್ಕಾರ ಮತ್ತು ಇಡೀ ಆಡಳಿತಯಂತ್ರ ಸಕ್ರಿಯವಾಗಿ ತೊಡಗಿಕೊಂಡಿದೆ. ಈ ವಿಷಯದಲ್ಲಿ ರಾಜಕಾರಣ ಮಾಡುವವರಿಗೆ ಏನು ಹೇಳ್ಳೋಣ? ರಾಜಕಾರಣಿಕ್ಕಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ಶೆಟ್ಟರ್‌ ಹೇಳಿದರು.

ಹೂಡಿಕೆಗೆ ಚೀನಾ ಕೈಗಾರಿಕೋದ್ಯಮಿಗಳಿಗೆ ಆಹ್ವಾನ
ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಚಾರವಾಗಿ ಚೀನಾದ 18 ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆಹ್ವಾನ ಮಾಡಿದ್ದೇವೆ. ಇಲ್ಲಿನ ಭೂ ಸ್ವಾಧೀನ ಪ್ರಕ್ರಿಯೆ, ದರ ನಿಗದಿ ಹಾಗೂ ವಿದ್ಯುತ್‌ ಪೂರೈಕೆ ಇತ್ಯಾದಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬಹುದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ. ಮುಂದಿನ ವರ್‌ಷ ಜಾಗತೀಕ ಹೂಡಿಕೆದಾರರ ಸಮಾವೇಶ ಮಾಡಲಿದ್ದೇವರ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮಾಡಬೇಕಿತ್ತು. ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸರ್ಕಾರಪತನಕ್ಕೆ ಕೈಹಾಕಲ್ಲ ಮತ್ತು ಬಿಜೆಪಿ ಸರ್ಕಾರ ಬೀಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಾcಗತವಿದೆ. ಇದೇ ಮಾತು ದೇವೇಗೌಡರ ಬಾಯಿಂದ ಬಂದರೆ ಗಂಭೀರತೆಯಿರುತಿತ್ತು. ದೇವೇಗೌಡರು ಅದರ ಬಗ್ಗೆ ಮಾತನಾಡಲಿ, ನಮಗೇನು ಬೆಂಬಲ ಕೊಡಿ ಅಂತ ಹೇಳಿಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಜಿಂದಲ್‌ ಗೆ ಹಿಂದಿನ ಸರ್ಕಾರ ಭೂಮಿ ಹಂಚಿಕೆ ಮಾಡಿದ್ದರ ವಿರುದ್ಧ ಹೋರಾಟ ಮಾಡಿದ್ದೇವೆ. ಅದನ್ನು ರದ್ದು ಮಾಡುವ ನಿರ್ಧಾರ ನಾನೊಬ್ಬನೇ ಮಾಡಲು ಸಾಧ್ಯವಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆಯಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಖಡತವನ್ನೇ ಇನ್ನೂ ನೋಡಿಲ್ಲ.
– ಜಗದೀಶ್‌ ಶೆಟ್ಟರ್‌, ಕೈಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next