Advertisement

ನವ ಭಾರತದ ಬಜೆಟ್‌ ಮಂಡನೆ: ಸಿ.ಟಿ.ರವಿ

12:40 AM Jul 06, 2019 | Lakshmi GovindaRaj |

ಬೆಂಗಳೂರು: ರೈತ ಭಾರತ ಮತ್ತು ಕಾರ್ಮಿಕ ಭಾರತವನ್ನು ಒಳಗೊಂಡಿರುವ ನವ ಭಾರತದ ಬಜೆಟ್‌ ಮಂಡನೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಬಜೆಟ್‌ ಕುರಿತು ಮಾತನಾಡಿದರು.

Advertisement

ಉದ್ಯೋಗ ಸೃಷ್ಟಿಗೆ ಒತ್ತು, ಮೂಲ ಸೌಕರ್ಯ ಅಭಿವೃದ್ಧಿಗೆ ನೀಲನಕ್ಷೆ ಜತೆಗೆ ಭಾರತ ಮಾಲಾದಡಿ ರಸ್ತೆ ಸಂಪರ್ಕ, ಸಾಗರ್‌ ಮಾಲಾ ಮೂಲಕ ಜಲ ಸಂಪರ್ಕ, “ಉಡಾನ್‌’ ಯೋಜನೆಯಡಿ ವಾಯು ಸಂಪರ್ಕ ಕಲ್ಪಿಸುವ ಯೋಜನೆ ಒಳಗೊಂಡಿರುವ ದೇಶದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯ ಬಜೆಟ್‌ ಇದಾಗಿದೆ ಎಂದು ಹೇಳಿದರು.

ಈ ಹಿಂದೆ ಫೆ.1ರಂದು ಮಂಡನೆಯಾದ ಪೂರಕ ಬಜೆಟ್‌ನಲ್ಲಿ ರೈತರಿಗೆ ಬರಪೂರ ಕೊಡುಗೆ ನೀಡಲಾಗಿತ್ತು. ಇದೀಗ ಕಾರ್ಮಿಕರು, ಸಣ್ಣ ವ್ಯಾಪಾರಿಗಳಿಗೆ 3000 ಪಿಂಚಣಿ ಯೋಜನೆ ಘೋಷಿಸುವ ಮೂಲಕ ಎಲ್ಲರ ಕಡೆಗೆ ದೃಷ್ಟಿ ಇದೆ ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿದೆ ಎಂದು ತಿಳಿಸಿದರು.

ಪೆಟ್ರೋಲ್‌, ಡೀಸೆಲ್‌ ಮೇಲೆ ಉಪಕರ ವಿಧಿಸಿರುವುದಕ್ಕೆ ಸಿದ್ದರಾಮಯ್ಯನವರು ಟೀಕಿಸಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಪೆಟ್ರೋಲ್‌ ಮೇಲೆ 2.50 ರೂ. ಉಪಕರ ವಿಧಿಸಿದಾಗ ಅವರೇಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಸಲ್ಲಿಸಿದ್ದ “ಒಂದು ದೇಶ, ಒಂದು ಗ್ರಿಡ್‌’ ಪ್ರಸ್ತಾವವನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next