Advertisement

ಹೊಸ ಮನೆ, ಬಾಡಿಗೆದಾರರಿಗೆ 58 ಯೂನಿಟ್‌ ಉಚಿತ

12:01 AM Jun 13, 2023 | Team Udayavani |

ಬೆಂಗಳೂರು: ಹೊಸ ಮನೆಗಳು ಹಾಗೂ ಹೊಸದಾಗಿ ಬಾಡಿಗೆಗೆ ಬಂದವರಿಗೆ ರಾಜ್ಯದ ಸರಾಸರಿ ಲೆಕ್ಕದಲ್ಲಿ 58 ಯೂನಿಟ್‌ ಉಚಿತ ವಿದ್ಯುತ್‌ ಸಿಗಲಿದೆ. 58ಕ್ಕಿಂತ ಹೆಚ್ಚು ಹಾಗೂ 200 ಯೂನಿಟ್‌ ಒಳಗೆ ಬಳಸುವ ವಿದ್ಯುತ್‌ಗೆ ಮಾತ್ರ ಈ ಗ್ರಾಹಕರು ಬಿಲ್‌ ಪಾವತಿಸಬೇಕಾಗುತ್ತದೆ.

Advertisement

ಹೊಸ ಮನೆ ಹಾಗೂ ಬಾಡಿಗೆದಾರ ಗ್ರಾಹಕರಲ್ಲಿ ಇದ್ದ ಗೊಂದಲಗಳನ್ನು ನಿವಾರಿಸಲು ಸರಕಾರ ಈ ಕ್ರಮ ಕೈಗೊಂಡಿದೆ. ಈ ಎರಡು ಬಗೆಯ ಗ್ರಾಹಕರ ಮಟ್ಟಿಗೆ ಸರಾಸರಿ ವಿದ್ಯುತ್‌ ಬಳಕೆ ಲೆಕ್ಕಾಚಾರ ಅನುಸರಿಸುವುದಿಲ್ಲ. ರಾಜ್ಯದ ಸರಾಸರಿ ಬಳಕೆ 53 ಯೂನಿಟ್‌ ಇದ್ದು, ಅದರ ಜತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ಸೇರಿಸಿ ಒಟ್ಟು 58 ಯೂನಿಟ್‌ ಅವರಿಗೆ ಉಚಿತವಾಗಿ ಸಿಗಲಿದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದರು.

ಒಂದು ವೇಳೆ 58 ಯೂನಿಟ್‌ಗಿಂತ ಜಾಸ್ತಿ ಬಳಸಿದರೆ ಹೆಚ್ಚುವರಿ ಬಳಕೆಯ ಯೂನಿಟ್‌ಗಳಿಗೆ ಬಿಲ್‌ ಪಾವತಿಸಬೇಕಾಗುತ್ತದೆ. 200 ಯೂನಿಟ್‌ ಮೀರಿದರೆ ಪೂರ್ಣ ಬಿಲ್‌ ಪಾವತಿಸಬೇಕಾಗುತ್ತದೆ. ವರ್ಷದ ಬಳಿಕ ಸರಾಸರಿ ಅಂದಾಜು ಲೆಕ್ಕ ಹಾಕ ಲಾಗುವುದು ಎಂದರು. ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಬಾರದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಹಿಂದೆ ವಿದ್ಯುತ್‌ ದರದಲ್ಲಿ 4 ಸ್ಲಾಬ್‌ಗಳಿದ್ದವು. 0ರಿಂದ 50 ಯೂನಿಟ್‌ವರೆಗೆ 4.15 ರೂ., 51ರಿಂದ 100ರ  ವ ರೆ ಗೆ 5.60 ರೂ., 101ರಿಂದ 200ರ ವರೆಗೆ 7.15 ರೂ., 200ಕ್ಕಿಂತ ಹೆಚ್ಚಿಗೆ ಇದ್ದರೆ 8.20 ರೂ. ನಿಗದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next