Advertisement

ಆಗಸ್ಟ್ 18ಕ್ಕೆ ಹೋಂಡಾ ಅಮೇಜ್‌ ಫೇಸ್‌ಲಿಫ್ಟ್

02:29 PM Aug 06, 2021 | Team Udayavani |

ನವದೆಹಲಿ: ಜನಪ್ರಿಯ ಕಾರು ಕಂಪನಿಯಾದ ಹೋಂಡಾ, ತನ್ನ ಭಾರೀ ನಿರೀಕ್ಷೆಯ ಹೋಂಡಾ ಅಮೇಜ್‌ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಆ. 18ರಂದು ಮಾರುಕಟ್ಟೆಗೆ ತರಲಿರುವುದಾಗಿ ಪ್ರಕಟಿಸಿದೆ. ರಾಜಸ್ಥಾನದಲ್ಲಿರುವ ಟಪುಕಾರಾದಲ್ಲಿರುವ ಕಂಪನಿಯ ಕಾರು ತಯಾರಿಕಾ ಘಟಕದಲ್ಲಿ ಈ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.

Advertisement

ಇದನ್ನೂ ಓದಿ:3ನೇ ಅಲೆ ನಿಯಂತ್ರಣಕ್ಕೆ “ವಾತ್ಸಲ್ಯ’ ಯೋಜನೆಯಡಿ ಮುಂಜಾಗ್ರತೆ! ಶೇ.90 ಮಕ್ಕಳ ಆರೋಗ್ಯ ತಪಾಸಣೆ

ಹೋಂಡಾ ಅಧಿಕೃತ ಷೋರೂಂಗಳಲ್ಲಿ 21,000 ರೂ. ನೀಡಿ ಅಥವಾ ಹೋಂಡಾ ಅಧಿಕೃತ ವೆಬ್‌ಸೈಟ್‌ನಲ್ಲಿ 5,000 ರೂ. ಪಾವತಿಸಿ ಕಾರು ಬುಕ್ಕಿಂಗ್‌ ಮಾಡಬಹುದು.1.2 ಲೀ ಪೆಟ್ರೋಲ್‌ ಹಾಗೂ 1.5 ಲೀ. ಡೀಸೆಲ್‌ ಇಂಜಿನ್‌ಗಳಲ್ಲಿ ಅಮೇಜ್‌ ಫೇಸ್‌ಲಿಫ್ಟ್ ಲಭ್ಯವಿರುತ್ತದೆ.

*1.2ಲೀ.ಪೆಟ್ರೋಲ್‌, 1.5ಲೀ. 9 ಡೀಸೆಲ್‌ಇಂಜಿನ್‌ನಲ್ಲಿ ಲಭ್ಯ

*ಹೋಂಡಾ ಷೋರೂಂ, ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ ಆರಂಭ

Advertisement

ವಿದ್ಯುತ್‌ ಚಾಲಿತ ವಾಹನ: ಒಪ್ಪಂದ
ಆಹಾರ ಪೂರೈಕಾ ಸಂಸ್ಥೆ ಸ್ವಿಗ್ಗಿ ತನ್ನ ವಿದ್ಯುತ್‌ಚಾಲಿತ ಡೆಲಿವರಿ ವಾಹನ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಿಲಯನ್ಸ್‌ ಬಿಪಿ ಮೊಬಿಲಿಟಿ ಲಿಮಿಟೆಡ್‌ (ಆರ್‌ಬಿಎಂಎಲ್‌) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯನ್ನು ಹೆಚ್ಚು ಸುಸ್ಥಿರ ಮತ್ತು ಮಾಲಿನ್ಯಮುಕ್ತಗೊಳಿಸುವ ಉದ್ದೇಶದಿಂದ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.

ಅದರಂತೆ, ಆರ್‌ಬಿಎಂಎಲ್‌ ಕಂಪನಿಯು ಸ್ವಿಗ್ಗಿಯ ಡೆಲಿವರಿ ಪಾಲುದಾರರಿಗೆ ವಿದ್ಯುತ್‌ಚಾಲಿತ ವಾಹನ ಬಳಕೆಗೆ ಅವಕಾಶ ಕಲ್ಪಿಸಲಿದೆ. ಈಗಾಗಲೇ ಈ ಕುರಿತ ಪ್ರಾಯೋಗಿಕ ಯೋಜನೆ ಆರಂಭವಾಗಿದ್ದು, ಮುಂದಿನ 4 ವರ್ಷ ಗಳಲ್ಲಿ ಪ್ರತಿ ದಿನ 8 ಲಕ್ಷ ಕಿ.ಮೀ.ಗಳ ಡೆಲಿವರಿಯನ್ನು ವಿದ್ಯುತ್‌ಚಾಲಿತ ವಾಹನಗಳ ಮೂಲಕವೇ ನಡೆಸುವ ಗುರಿಯನ್ನು ಸ್ವಿಗ್ಗಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next