Advertisement

ಐಟಿ ಫೈಲಿಂಗ್‌ ಸಮಸ್ಯೆಯೇ? ಅದಕ್ಕಿದೆ ಹೊಸ ಪರಿಹಾರ

10:40 AM Jan 02, 2018 | Team Udayavani |

ಹೊಸದಿಲ್ಲಿ: ಇ-ಫೈಲಿಂಗ್‌ ಮೂಲಕ ಆದಾಯ ತೆರಿಗೆ ಸಲ್ಲಿಕೆ ಅಥವಾ ರಿಟರ್ನ್ಸ್ ಸಲ್ಲಿಕೆ ಮಾಡುವಲ್ಲಿ ಸಮಸ್ಯೆ ಉಂಟಾಗಿದ್ದರೆ, ಅದಕ್ಕೆ ಇಲಾಖೆ ಪರಿಹಾರ ಸೂಚಿಸಿದೆ. ಇ- ಫೈಲಿಂಗ್‌ ಪೋರ್ಟಲ್‌ನಲ್ಲಿ ಶುಲ್ಕ ರಹಿತ ಸಂಖ್ಯೆ 18001 030025 ಮತ್ತು ನೇರ ಸಂಪರ್ಕ ಸಂಖ್ಯೆ 9180461 2200ಗೆ ಸಂಪರ್ಕ ಮಾಡಿ ಪರಿಹಾರ ಕಂಡುಕೊಳ್ಳಲು ಅವಕಾಶ ಉಂಟು. ಇಷ್ಟು ಮಾತ್ರವಲ್ಲದೆ ಇ-ಫೈಲಿಂಗ್‌ ಪೋರ್ಟಲ್‌ //www.incometaxindiaefiling.gov.in  ಮೂಲಕವೂ ತೆರಿಗೆ ಪಾವತಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಇನ್ನು ತೆರಿಗೆ ಪಾವತಿ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳಿಗೆ ಇರುವ ಪ್ರಶ್ನೆಗಳಿಗೆ ಹಾಲಿ ಇರುವ ದೂರವಾಣಿ ಸಂಖ್ಯೆಗಳಿಗೆ ಫೋನ್‌ ಮಾಡಿ ಪರಿಹಾರ ಕಂಡುಕೊಳ್ಳಬಹುದು.

Advertisement

ಸರಳವಾಗಿದೆ ನಿಯಮ: ಜಿಎಸ್‌ಟಿ ಅಡಿ ವ್ಯಾಪಾರಸ್ಥರು ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ಇರುವ ನಿಯಮಗಳನ್ನು ಸರಳೀಕರಿಸಲಾಗಿದೆ. ಹೀಗಾಗಿ ದಂಡ ಪಾವತಿ ಮಾಡದೆ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next