Advertisement

ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

10:40 AM Dec 08, 2021 | Team Udayavani |

ಬೆಂಗಳೂರು: ಕೆಲವು ಜಿಲ್ಲೆಗಳಲ್ಲಿ ಮಾತ್ರ ಒಮಿಕ್ರಾನ್ ಇದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ. ಹೀಗಾಗಿ ಮಾರ್ಗಸೂಚಿ ತಂದರೆ ಇಡೀ ರಾಜ್ಯಕ್ಕೆ ತರಬೇಕಾಗುತ್ತದೆ. ಕೇಂದ್ರದಿಂದಲೂ ಕೂಡ ಕೆಲ ಮಾರ್ಗಸೂಚಿ ಹೊರಡಿಸಲಾಗಿದೆ. ಹೀಗಾಗಿ ಇವೆಲ್ಲವನ್ನು ಪರಾಮರ್ಶಿಸಿ, ಡಿಸೆಂಬರ್, ಜನವರಿವರೆಗೆ ನಿಯಂತ್ರಣ ಮಾಡಲು ಮಾರ್ಗಸೂಚಿ ಹೊರಡಿಸುತ್ತೇವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊವೀಡ್ ಬಗ್ಗೆ ಅನೌಪಚಾರಿಕ ಸಭೆಯಿದೆ. ವಿವರ ಪಡೆದು ನಾಳಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಒಮಿಕ್ರಾನ್ ಹಾಗೂ ಕ್ಲಸ್ಟರ್ ಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆಯೂ ತೀರ್ಮಾನ ಮಾಡುತ್ತೇವೆ. ಬೂಸ್ಟರ್ ಡೋಸ್ ನೀಡುವ ವಿಚಾರದ ಬಗ್ಗೆ ಕೇಂದ್ರದವರು ಪರಿಶೀಲನೆ ಮಾಡುತ್ತಿದ್ದಾರೆ. ತಜ್ಞರ ಜೊತೆ ಚರ್ಚೆ ಮಾಡಿ ತಿಳಿಸುವುದಾಗಿ ಕೇಂದ್ರ ಆರೋಗ್ಯ ಸಚಿವರು ಹೇಳಿದ್ಸಾರೆ. ಅದಕ್ಕಾಗಿ ನಾವು ಕೂಡ ಕಾಯುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಒಮಿಕ್ರಾನ್ ನಿಂದ ಗುಣಮುಖರಾದ ವೈದ್ಯನಿಗೆ ಮತ್ತೆ ಕೋವಿಡ್ ಸೋಂಕು!

ಶಾಲೆ, ಹಾಸ್ಟೆಲ್ ಎಲ್ಲ ಒಳಗೊಂಡಂತೆ ಮಾರ್ಗಸೂಚಿ ಹೊರಡಿಸಲಾಗುವುದು. ಯಾರು ಆತಂಕ ಪಡುವ ಸ್ಥಿತಿ ಏನಿಲ್ಲ, ಅಗತ್ಯವೂ ಇಲ್ಲ. ಪೋಷಕರು ಕೂಡ ಆತಂಕ ಪಡಬಾರದು. ಮಕ್ಕಳನ್ನು ಜಾಗೃತರಾಗಿ ನೋಡಿಕೊಳ್ಳಬೇಕು. ಶಾಲೆಯಲ್ಲಿ ಸ್ವಚ್ಚತೆ ಹಾಗೂ ಶಾಲೆಯಲ್ಲಿ ಕೊವೀಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ವಸತಿ ಶಾಲೆಯಲ್ಲಿ ಕೊವೀಡ್ ಪರಿಸ್ಥಿತಿ ಬಗ್ಗೆ ವಿವರ ಪಡೆಯುತ್ತೇವೆ ಎಂದರು.

Advertisement

ಹೊಸ ವರ್ಷಚಾರಣೆ ಬಗ್ಗೆ‌ ನಮಗೆ ಗೊತ್ತಿದೆ. ಆದರೆ ಆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next