Advertisement

ಮೈಸೂರು ಮೃಗಾಲಯ ಸೇರಿದೆ ನಾಲ್ಕು ಒರಾಂಗುಟಾನ್‌, ಎರಡು ಗೊರಿಲ್ಲಾ

10:15 PM Oct 02, 2021 | Team Udayavani |

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ 50 ವರ್ಷಗಳ ಬಳಿಕ ನಾಲ್ಕು ಒರಾಂಗುಟಾನ್‌ ಹಾಗೂ 10 ವರ್ಷಗಳ ಬಳಿಕ ಎರಡು ಗೊರಿಲ್ಲಾಗಳನ್ನು ಕರೆತರಲಾಗಿದ್ದು, ಮಾಸಾಂತ್ಯಕ್ಕೆ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿವೆ.

Advertisement

ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯವು ಇತ್ತೀಚೆಗೆ ಎರಡು ಜಿರಾಫೆಗಳನ್ನು ನೀಡಿತ್ತು. ಇದರ ಫ‌ಲವಾಗಿ ಮಲೇಷಿಯಾ ಮತ್ತು ಸಿಂಗಾಪುರದಿಂದ ತಲಾ ಎರಡು ಒರಾಂಗುಟಾನ್‌ಗಳನ್ನು ತರಿಸಿಕೊಳ್ಳಲಾಗಿದೆ. ಜತೆಗೆ ಜರ್ಮನಿಯಿಂದ ಎರಡು ಗೊರಿಲ್ಲಾ ಕರೆತರಲಾಗಿದ್ದು, ಆರು ಪ್ರಾಣಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ:ದಸರಾ ಉದ್ಘಾಟನೆಗೆ ಎಸ್‌.ಎಂ.ಕೃಷ್ಣರಿಗೆ ಸಿಎಂ ಅಧಿಕೃತ ಆಹ್ವಾನ

ಹತ್ತು ವರ್ಷಗಳ ಹಿಂದೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದ ಫೋಲೋ ಹೆಸರಿನ ಗೊರಿಲ್ಲಾ ವಯೋಸಹಜವಾಗಿ ಮೃತಪಟ್ಟಿತ್ತು. ಬಳಿಕ ಗೊರಿಲ್ಲಾ ಮನೆ ಖಾಲಿಯಾಗಿತ್ತು. ಈಗ ಗೊರಿಲ್ಲಾ ಹೊಂದಿರುವ ಏಷ್ಯಾದ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಮೈಸೂರು ಮೃಗಾಲಯ ಪಾತ್ರವಾಗಿದೆ.

ಒರಾಂಗುಟಾನ್‌
ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ಪ್ರಭೇದವಾದ ಒರಾಂಗುಟಾನ್‌ ದೇಶದ ಯಾವುದೇ ಮೃಗಾಲಯದಲ್ಲಿಲ್ಲ. 50 ವರ್ಷಗಳ ಹಿಂದೆ ಮೈಸೂರು ಮೃಗಾಲಯದಲ್ಲಿ ಒರಾಂಗುಟಾನ್‌ ಮೃತಪಟ್ಟ ಬಳಿಕ ಅದನ್ನು ನೋಡುವ ಅವಕಾಶ ಇರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next