Advertisement

ನೂತನ ಸಬರ್ಬನ್ ರೈಲ್ವೆ ಕಾಮಗಾರಿಗೆ ಒಪ್ಪಿಗೆ : ಸಂಸದ ತೇಜಸ್ವಿ ಸೂರ್ಯ

06:34 PM Oct 14, 2019 | Team Udayavani |

ಬೆಂಗಳೂರು : ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿನ ನೂತನ ಸರ್ಕಾರ ಬೆಂಗಳೂರಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸಬರ್ಬನ್ ರೈಲ್ವೆ ಕಾಮಗಾರಿಗೆ ಒಪ್ಪಿಗೆ ನೀಡಿದೆ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ರೇಲ್ವೆ ನೇಮಕಾತಿಯ ‘ಡಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಹ ನೈಋತ್ಯ ರೇಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರೊಂದಿಗೆ ಚರ್ಚಿಸಿದರು.ರೇಲ್ವೇ ನೇಮಕಾತಿಯ ಮಾಹಿತಿ ಮತ್ತು ಜಾಹೀರಾತುಗಳು ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಇರುವುದರಿಂದ ಸ್ಥಳೀಯ ಕನ್ನಡಿಗರಿಗೆ ಈ ಕುರಿತು ತೊಂದರೆಯಾಗುತ್ತಿದೆ ಎಂದರು.

ಕನ್ನಡಿಗರು ರೇಲ್ವೆಯಲ್ಲಿ ಉದ್ಯೋಗ ಪಡೆಯಲು ಇರುವ ಕೆಲವು ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ.ಇನ್ನು ಮುಂದೆ ರೇಲ್ವೆ ವೆಬ್ ಸೈಟ್ ನಲ್ಲಿ ಪ್ರಕಟವಾಗುವ ನೇಮಕಾತಿ ಮಾಹಿತಿ ಹಾಗೂ ಜಾಹೀರಾತುಗಳು ಕನ್ನಡದಲ್ಲಿಯೂ ಇರಲೇಬೇಕೆಂದು ಒತ್ತಾಯ ಮಾಡಲಾಗಿದೆ.ಅಧಿಕಾರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಒಂದು ತಿಂಗಳೊಳಗೆ ವೆಬ್ ಸೈಟ್ ಕನ್ನಡಮಯವಾಗಲಿದೆ ಎಂದು ಹೇಳಿದರು.

ರೇಲ್ವೆ ನಿಲ್ದಾಣಗಳ ಸ್ಥಿತಿಗತಿಯ ಕುರಿತಾಗಿ ಮಾತನಾಡುತ್ತ, ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್,ಪಾದಚಾರಿ ಮಾರ್ಗ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜನದಟ್ಟಣೆ ಜಾಸ್ತಿ ಇರುವ ಸಮಯದಲ್ಲಿ ಐಟಿ ಉದ್ಯೋಗಿಗಳು ಹಾಗೂ ಇತರರಿಗೆ ಸಹಾಯವಾಗುವಂತೆ ಕೆಂಪೇಗೌಡ ರೈಲು ನಿಲ್ದಾಣ- ವೈಟ್ ಫೀಲ್ಡ್- ಯಶವಂತಪುರ ಹಾಗೂ ಹೊಸೂರು ಮಾರ್ಗಗಳಲ್ಲಿ ಮೆಮು/ಡೆಮು ರೈಲು ಸೇವೆಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next