“ಕಲ್ಮನೆ ಕಾಫಿ ವಿಆರ್’ ಬೆಂಗಳೂರಿನಲ್ಲಿ ತನ್ನ ಮಳಿಗೆಗೆ ಹೊಸ ಸ್ಪರ್ಶ ನೀಡುತ್ತಿದೆ. ಈ ಹೊಸ ಮಳಿಗೆಯ ಆರಾಮದಾಯಕ ವಾತಾವರಣ ಮತ್ತು ವೈವಿಧ್ಯಮಯ ಆಯ್ಕೆಗಳು ಕಾಫಿ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ಮಾಲೀಕರದು. ಥಿಕ್ ಶೇಕ್‌ಗಳು, ಸಂಡೇಸ್ ಮತ್ತು ತಾಜಾ ಹುರಿದ ಸ್ಥಳೀಯ ಫ್ಲೇವರ್‌ಗಳಿಂದ ಮಳಿಗೆಯಲ್ಲಿ ಲಭ್ಯವಿರುವ ಶ್ರೇಣಿಗಳನ್ನು ವಿಸ್ತರಿಸಲಾಗಿದೆ.
ಫೋರಮ್ ಮಾಲ್‌ನಲ್ಲಿ ಶುರುವಾದ ಮೊದಲ ಮಳಿಗೆ ಈಗಾಗಲೇ ಕಾಫಿಯನ್ನು ಪಾರಂಪರಿಕ ರೀತಿಯಲ್ಲಿ ಸಿದ್ಧಪಡಿಸಿ ಸರ್ವ್ ಮಾಡುವ ರೀತಿಯಿಂದ ಜನಮನ ಗೆದ್ದಿದೆ.
ತಾಜಾ ಆಗಿ ಹುರಿದು ಮಾಡಿದ ಪುಡಿಯಿಂದ ಉತ್ತಮ ಕಾಫಿ ತಯಾರಿಸಿ ನೀಡುವ ಕಲ್ಪನೆ ಮೆಚ್ಚುಗೆ ಪಡೆದಿದ್ದು ಇವತ್ತು ಕಲ್ಮನೆ ಕಾಫಿ ಬೆಂಗಳೂರು, ಚೆನ್ನೈ ಮತ್ತು ಮುಂಬೈ ಮಹಾನಗರಗಳಲ್ಲಿ 11 ಮಳಿಗೆಗಳನ್ನು ಹೊಂದಿದೆ.
ಇತ್ತೀಚೆಗಷ್ಟೆ ಇಂಡಿಯಾ ಇಂಟರ್‌ನ್ಯಾಶನಲ್ ಕಾಫಿ ಫೆಸ್ಟಿವಲ್ (ಐಐಎಫ್ಸಿ 2016)ನಲ್ಲಿ ಬ್ರಾಂಡ್ ಅತ್ಯುತ್ತಮ ಕೆಫೆ ಸರಣಿ ಮತ್ತು ಅತ್ಯುತ್ತಮ ಫಿಲ್ಟರ್ ಕಾಫಿ- ಈ ಎರಡು ಪ್ರಶಸ್ತಿ ಗಳಿಸಿದೆ. ಇಲ್ಲಿನ ಜನಪ್ರಿಯ ಸ್ವಾದಗಳೆಂದರೆ ಕಾಫಿ ಸಾಮ್ರಾಟ್, ಕಾಫಿ ಪ್ರೀಮಿಯಂ, ಫಿಲ್ಟರ್ ಕಾಫಿ ಬ್ಲೂ ಗ್ರಾಸ್, ಹಾಮೊìನಿ, ಮೈಸೂರು ನಗ್ಗೆಟ್ಸ್, ಪೀಬೆರ್ರಿ ಪ್ರೀಮಿಯಂ, ಕಾಂಟಾಟಾ, ಕ್ರೆಸೆಂಡೊ, ಕ್ಯಾಲಿಪೊÕಸ್.