ಮುಂಬೈ : ಕನ್ನಡದ ಪ್ರತಿಭೆ ರವಿ ಬಸ್ರೂರ್ ಅವರು ಮತ್ತೊಮ್ಮೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅವರು ‘ಗರುಡ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಯುದ್ಧ ಪೀಡಿತ ಅಫ್ಗಾನಿಸ್ತಾನ್ ಕುರಿತು ಬಾಲಿವುಡ್ ನಲ್ಲಿ ಹೊಸ ಸಿನಿಮಾ ಇಂದು (ಸೆ.15) ಘೋಷಣೆಯಾಗಿದೆ. ಅಜಯ್ ಕಪೂರ್ ಹಾಗೂ ಸುಭಾಸ್ ಕಾಳೆ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಚಿತ್ರಕ್ಕೆ ‘ಗರುಡ’ ಎಂದು ನಾಮಕರಣ ಮಾಡಲಾಗಿದೆ.
ಗರುಡ ನೈಜ ಕಥೆಯನ್ನಾಧರಿತ ಸಿನಿಮಾ. ಅಫ್ಗಾನಿಸ್ಥಾನ್ ತಾಲಿಬಾನಿಗಳ ವಶವಾದ ವೇಳೆ ಅಲ್ಲಿಯ ಜನರು ದೇಶ ತೊರೆಯಲು ಕಷ್ಟ ಪಡುತ್ತಿದ್ದ ಸಂದರ್ಭದಲ್ಲಿ ಭಾರತೀಯ ಏರ್ ಪೋರ್ಸ್‍ನ ಗರುಡ ವಿಂಗ್‍ನ ಕಮಾಂಡೋ ತೋರಿದ ಶೌರ್ಯದ ಕಥಾ ಹಂದರ ಈ ಚಿತ್ರದಲ್ಲಿರಲಿದೆ. ಇಂದು ಗರುಡ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಇನ್ನು ಈ ಚಿತ್ರದ ನಾಯಕ ಯಾರು ಎಂಬುದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಬಹುಶಃ ಅಕ್ಷಯ್ ಕುಮಾರ್ ಇಲ್ಲವೆ ಜಾನ್ ಅಬ್ರಾಹಂ ನಾಯಕ ನಟನಾಗಬಹುದು ಎನ್ನುವುದು ಎಲ್ಲರ ನಿರೀಕ್ಷೆ. ಈ ಉಭಯ ತಾರೆಯರ ಜೊತೆ ಅಜಯ್ ಕಪೂರ್ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ವರ್ಕ್ ಮಾಡಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಗರುಡ ಚಿತ್ರಕ್ಕೆ ನಾಯಕನಾಗುವ ಸಾಧ್ಯತೆ ಇದೆ.
ಇನ್ನು ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಸಂಗೀತ ಸಂಯೋಜಿಸಿವುದು ಈ ಚಿತ್ರದ ಮತ್ತೊಂದು ವಿಶೇಷ. ಇವರು ಬಾಲಿವುಡ್ ಚಿತ್ರ ‘ಯುಧ್ರಾ’ಗೆ ಸಂಗೀತ ನೀಡಿದ್ದಾರೆ. ಕೆಜಿಎಫ್ ಸರಣಿ ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಬಸ್ರೂರ್ ಪ್ರಭಾಸ್ ಅವರ ಸಲಾರ್ ಚಿತ್ರಕ್ಕೂ ಇವರದೆ ಸಂಗೀತ ಇರಲಿದೆ.