Advertisement

ಐಫೋನ್‌ ಮತ್ತು ಐಪ್ಯಾಡ್‌ ಬಳಕೆದಾರರಿಗೆ ಹೊಸ ಫೀಚರ್‌ ಗಳನ್ನು ನೀಡಲಿರುವ ಆ್ಯಪಲ್‌

05:11 PM Jun 24, 2020 | sudhir |

ಹೊಸದಿಲ್ಲಿ: ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಎಲ್ಲ ಉದ್ಯಮಗಳು ಮತ್ತೇ ವ್ಯಾಪಾರ ವಹಿವಾಟು ಪ್ರಾರಂಭಿಸಿದ್ದು, ಗ್ರಾಹಕರನ್ನು ಸೆಳೆಯಲು ವಿಭಿನ್ನ ಪ್ರಯತ್ನಗಳನ್ನು ಮಾಡಿದೆ.

Advertisement

ಇದೀಗ ಆ್ಯಪಲ್‌ ಕಂಪನಿ ಕೂಡ ಇದೇ ಮಾರ್ಗವನ್ನು ಹಿಡಿದಿದ್ದು, ಐಫೋನ್‌ ಮತ್ತು ಐಪ್ಯಾಡ್‌ ಬಳಕೆದಾರರಿಗೆ ಹೊಸ ಐಒಎಸ್‌ 14 ಮತ್ತು ಐಪ್ಯಾಡ್‌​ ಒಎಸ್‌14 ನಲ್ಲಿ ಡಿಫಾಲ್ಟ್ ಇ-ಮೈಲ್‌ ಮತ್ತು ಬ್ರೌಸರ್‌ ಅಪ್ಲಿಕೇಶನ್‌ಗಳನ್ನು ಬದಲಾಯಿಸಲು ಹೊಸ ಫೀಚರ್‌ ಅನ್ನು ಪರಿಚಯಿಸುವುದಾಗಿ ತಿಳಿಸಿದೆ.

ಇನ್ನು ಬದಲಾವಣೆಯ ಬಗ್ಗೆ ಕಂಪನಿ ಸಂಪೂರ್ಣವಾಗಿ ಮಾಹಿತಿ ಹಂಚಿಕೊಳ್ಳದ ಕಂಪನಿ, ನೂತನ ಫೀಚರ್‌ ಅಪ್ಡೆಟ್‌ಗೊಂಡರೆ ಹೊಸ ಇ-ಮೈಲ್‌ ರಚಿಸುವಾಗ ಅಥವಾ ಲಿಂಕ್‌ ಕ್ಲಿಕ್‌ ಮಾಡಿದಾಗ ಡಿಫಾಲ್ಟ್ ವೆಬ್‌ ಬ್ರೌಸರ್‌ಮತ್ತು ಇ -ಮೈಲ್‌ ಅಪ್ಲಿಕೇಶನ್‌ ಹೊಂದಿಸಲು ಪ್ರಿ-ವೀವ್‌ ಪೇಜ್‌ ಆಯ್ಕೆಯಾಗಿ ಬರಲಿದೆ ಎಂದು ಹೇಳಿದೆ.

ಆದರೆ ಸದ್ಯ ಈ ಕುರಿತು ಸಾಫ್ಟ್ ವೇರ್ ಡೆವಲಪರ್‌ಗಳು ಇನ್ನು ಕಾರ್ಯಾಚರಿಸುತ್ತಿದ್ದು, ಹೊಸ ಫಿಚರ್ಸ್ ಇನ್ನೂ ಅಪ್ಡೇಟ್‌ ಮಾಡಲಾಗಿಲ್ಲ ಎಂದು ಮೊಬೈಲ್‌ ಕಂಪನಿ ದಿ ವರ್ಜ್‌​ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next