ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್‌ಗೆ ಹೊಸ ಸೌಲಭ್ಯಗಳನ್ನು ಶೀಘ್ರವೇ ಸೇರ್ಪಡೆಗೊಳಿಸುವುದಾಗಿ, ಆ ಸಂಸ್ಥೆಯ ಮಾಲಕತ್ವ ಹೊಂದಿರುವ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ.
“ಡಿಸೆಪ್ಪಿಯರಿಂಗ್ ಮೋಡ್’, “ವ್ಯೂ ಒನ್ಸ್’ ಹಾಗೂ “ಮಲ್ಟಿ ಡಿವೈಸ್’ ಎಂಬ ಫೀಚರ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದೆ. “ಡಿಸೆಪ್ಪಿಯ ರಿಂಗ್ ಮೋಡ್’ ಸೌಲಭ್ಯದಿಂದಾಗಿ ವಾಟ್ಸ್‌ಆ್ಯಪ್ ಬಳಕೆದಾರರು ಹಂಚಿಕೊಳ್ಳುವ ಸಂದೇಶಗಳು, ಫೋಟೋ, ವೀಡಿಯೋಗಳಿಗೆ ಮತ್ತಷ್ಟು ಖಾಸಗಿಯನ್ನಾಗಿಸಲಿದೆ.
“ವ್ಯೂ ಒನ್ಸ್’ ಫೀಚರ್‌ನಡಿ ಬಳಕೆದಾರರು ತಮಗೆ ಬಂದಿರುವ ಸಂದೇಶ ಹಾಗೂ ಯಾವುದೇ ಮಿಡಿಯಾ ಫೈಲ್‌ಗಳನ್ನು ಕೇವಲ ಒಮ್ಮೆ ಮಾತ್ರ ವೀಕ್ಷಿಸಬಹುದು. ಅದನ್ನು ವೀಕ್ಷಿಸಿದೊಡನೆ ತನ್ನಿಂತಾನೇ ಸಂದೇಶ ಡಿಲೀಟ್ ಆಗುತ್ತದೆ. ಇನ್ನು, “ಮಲ್ಟಿ ಡಿವೈಸ್’ ಫೀಚರ್‌ನಡಿ, ಬಳಕೆದಾರರು ಇಂಟರ್ನೆಟ್ ಇಲ್ಲದೆಯೇ ಒಂದಕ್ಕಿಂತ ಹೆಚ್ಚು ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ವಾಟ್ಸ್‌ಆ್ಯಪ್ ಅನ್ನು ಬಳಸಬಹುದು ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ:ಯಾವುದೇ ಆದೇಶವಿಲ್ಲ, ಕೇರಳ ತಪ್ಪು ಗ್ರಹಿಕೆ?: ಕರ್ನಾಟಕಕ್ಕೆ “KSRTC’ ಬ್ರ್ಯಾಂಡ್ ಅಬಾಧಿತ
ಸದ್ಯಕ್ಕೆ ವಾಟ್ಸ್‌ಆ್ಯಪ್ ವೆಬ್ ಎಂಬ ಫೀಚರ್‌ನ ಅಡಿಯಲ್ಲಿ ವಾಟ್ಸ್‌ಆ್ಯಪ್ ಅನ್ನು ಕೇವಲ ಮೊಬೈಲ್ ಹಾಗೂ ಡೆಸ್ಕ್ಟಾಪ್‌ಗ್ಳಲ್ಲಿ ಇದನ್ನು ಬಳಸಬಹುದು. ಆದರೆ, ಇದು ಇಂಟರ್ನೆಟ್ ಸಂಪರ್ಕವಿದ್ದರೆ ಮಾತ್ರ ಕೆಲಸ ಮಾಡುವಂಥದು.