Advertisement

ಪ್ರಿಯಾಗೆ ಧೋನಿ ಅಂದರೆ ಪಂಚಪ್ರಾಣ

06:35 AM Feb 21, 2018 | |

ಕೊಚ್ಚಿ: ಕಣ್‌ ಹೊಡೆದು ಪಡ್ಡೆ ಹುಡುಗರ ನಿದ್ರೆ ಕೆಡಿಸಿರುವ ಮಲೆಯಾಳಂ ಸಿನಿಮಾ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌
ಗೆ ಆ ದಿಗ್ಗಜ ಕ್ರಿಕೆಟರ್‌ ಎಂದರೆ ಪಂಚಪ್ರಾಣವಂತೆ. ಸ್ವತಃ ಕಣ್‌ ಹೊಡೆಯೋ ಹುಡುಗಿ ಪ್ರಿಯಾ ಅವರೇ ಇದನ್ನು
ಹೇಳಿದ್ದಾರೆ.

Advertisement

ಆ ಕ್ರಿಕೆಟರ್‌ ಯಾರು ಗೊತ್ತಾ? ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ. ಟೀವಿ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಪ್ರಿಯಾ ಹೇಳಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ಒರು ಆಡಾರ್‌ ಲವ್‌ ಸಿನಿಮಾದಲ್ಲಿ ಅವರು ಪ್ರಿಯಾ ಕಣ್‌ ಹೊಡೆದ ವಿಡಿಯೊ ವೈರಲ್‌ ಆಗಿತ್ತು. ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅಧಿಕ ವೀಕ್ಷಣೆಗೆ ಕಾರಣವಾಗಿತ್ತು. ಪ್ರಿಯಾ ಹಗಲು-ರಾತ್ರಿಯಾಗುವುದರೊಳಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕ ಲೈಕ್ಸ್‌, ಕಾಮೆಂಟ್ಸ್‌ ಪಡೆದ ದಿಗ್ಗಜರ ಸಾಲಿನಲ್ಲಿ ನಿಂತಿದ್ದಳು ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next