ಉಡುಪಿ: ಕಮಲದ ಎಲೆಯಂತೆಯೇ ನೀರನ್ನು ವಿಕರ್ಷಿಸುವ ಮೇಲ್ಮೆ„ ನಿರ್ಮಾಣ ತಂತ್ರಜ್ಞಾನ ವನ್ನು ಮಣಿಪಾಲ ಮಾಹೆ ವಿ.ವಿ.ಯ ಸಂಶೋಧಕರು ಆವಿಷ್ಕರಿಸಿದ್ದಾರೆ. ನೀರು ತನ್ನ ಮೇಲ್ಮೆ„ಗೆ ಅಂಟಿಕೊಳ್ಳಲು ಬಿಡದೆ ವಿಕರ್ಷಿಸುವ ಅಥವಾ ಹಿಮ್ಮೆಟ್ಟಿಸುವ ಗುಣವನ್ನು ಸೂಪರ್‌ಹೈಡ್ರೋಫೊಬಿಸಿಟಿ ಎಂದು ಕರೆಯುತ್ತಾರೆ.
ಇಂತಹ ಗುಣ ಕಮಲ, ಕೆಸುವಿನಂತಹ ಸಸ್ಯಗಳ ಎಲೆ, ವಿವಿಧ ಜಲಚರಗಳಲ್ಲಿ, ಜಲ ಪಕ್ಷಿಗಳಲ್ಲಿ ಕಂಡುಬರುತ್ತದೆ.
ಲೋಹೀಯ ನ್ಯಾನೊಪಾರ್ಟಿಕಲ್ ಲೇಪಿತ ಮೇಲ್ಮೆ„ಯಲ್ಲಿ ಅಲ್ಟ್ರಾಫಾಸ್ಟ್ ಲೇಸರ್ ಕಿರಣಗಳನ್ನು ಜಾಗ್ರತೆಯಾಗಿ, ನಿಯಂತ್ರಿತ ರೀತಿಯಲ್ಲಿ ಹಾಯಿಸಿ ಇಂತಹ ನೈಸರ್ಗಿಕ ಗುಣವನ್ನು ಉಂಟು ಮಾಡುವಲ್ಲಿ ಮಾಹೆ ವಿ.ವಿ.ಯ ಆಟೋಮಿಕ್ ಆ್ಯಂಡ್ ಮೊಲೆಕ್ಯುಲರ್ ಫಿಸಿಕ್ಸ್ ವಿಭಾಗದ ಸಂಶೋಧಕರು ಯಶಸ್ವಿಯಾಗಿದ್ದಾರೆ. ಹಡಗು, ದೋಣಿಗಳು ನೀರಿನಲ್ಲಿದ್ದಾಗಲೂ ನೀರು ಅಂಟಿಕೊಳ್ಳದಂತೆ ಮಾಡಿದರೆ ಬಾಳಿಕೆ ಹೆಚ್ಚುತ್ತದೆ.
ನ್ಯೂಕ್ಲಿಯರ್ ರಿಯಾಕ್ಷನ್ ಪ್ರಕ್ರಿಯೆಯಲ್ಲಿಯೂ ಇಂತಹ ಸಾಮಗ್ರಿಗಳ ಆವಶ್ಯಕತೆ ಇದೆ. ಸಿ.ವಿ. ರಾಮನ್ ಅವರು ಕಂಡು ಹಿಡಿದ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನವನ್ನು ಸಂಶೋಧಕರು ಅನ್ವಯಿಸಿ ಸಂಶೋಧನೆ ಮಾಡಿ ದ್ದಾರೆ. ಇದು ವೈದ್ಯಕೀಯ ರಂಗಕ್ಕೂ ಅನುಕೂಲ ಕರ ವಾದ ಸಂಶೋಧನೆಯಾಗಿದೆ.
ಮಾಹೆ ವಿ.ವಿ.ಯ ಆಟೋಮಿಕ್ ಆ್ಯಂಡ್ ಮೊಲೆಕ್ಯುಲರ್ ಫಿಸಿಕ್ಸ್ ವಿಭಾಗದ ಸಂಶೋಧಕರಾದ ಡಾ| ಸಾಜನ್ ಡಿ. ಜಾರ್ಜ್, ಡಾ| ಜಿಜೊ ಈಸೋ ಜಾರ್ಜ್, ಡಾ| ಉಣ್ಣಿಕೃಷ್ಣನ್ ವಿ.ಕೆ., ಡಾ| ಸಂತೋಷ್ ಚಿದಂಗಿಲ್, ಡಾ| ದೀಪಕ್ ಮಾಥುರ್ ಈ ಸಂಶೋಧನೆ ನಡೆಸಿದ ಸಾಧಕರು. ಈ ಸಂಶೋಧನೆಯ ವಿವರ ವರದಿ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.