Advertisement

New ERA for RCB: ಮುಖ್ಯ ಕೋಚ್ ಹುದ್ದೆಗೆ ಆ್ಯಂಡಿ ಫ್ಲವರ್ ನೇಮಕ

11:13 AM Aug 04, 2023 | Team Udayavani |

ಬೆಂಗಳೂರು: ಐಸಿಸಿ ಹಾಲ್ ಆಫ್ ಫೇಮರ್ ಮತ್ತು ಟಿ20 ವಿಶ್ವಕಪ್ ವಿಜೇತ ಕೋಚ್ ಆ್ಯಂಡಿ ಫ್ಲವರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿದ್ದಾರೆ. ಟಿ20 ಕ್ರಿಕೆಟ್ ಜಗತ್ತಿನ ದಿಗ್ಗಜ ಕೋಚ್ ಎಂದೇ ಹೆಸರಾದ ಆ್ಯಂಡಿ ಫ್ಲವರ್ ಅವರನ್ನು ಆರ್ ಸಿಬಿ ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗ ವಿಶೇಷ ಪ್ರಕಟಣೆ ಹೊರಡಿಸಿದೆ.

ಪ್ರಪಂಚದಾದ್ಯಂತದ ಐಪಿಎಲ್ ಮತ್ತು ಟಿ20 ತಂಡಗಳಿಗೆ ತರಬೇತುದಾರರಾಗಿರುವ ಆ್ಯಂಡಿಯವರ ಅನುಭವ ಮತ್ತು ಪಿಎಸ್ಎಲ್, ಐಎಲ್ ಟಿ20, ದಿ ಹಂಡ್ರೆಡ್ ಮತ್ತು ಅಬುಧಾಬಿ ಟಿ10 ನಲ್ಲಿ ತಂಡಗಳನ್ನು ಪ್ರಶಸ್ತಿಯತ್ತ ಮುನ್ನಡೆಸುವ ಅನುಭವವವು ಚಾಂಪಿಯನ್‌ ಶಿಪ್ ಗೆಲ್ಲುವ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಆರ್ ಸಿಬಿ ಯ ಪ್ಲೇ ಬೋಲ್ಡ್ ತತ್ವವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಆರ್ ಸಿಬಿ ಬರೆದುಕೊಂಡಿದೆ.

ತಂಡದ ನಿರ್ದೇಶಕರಾಗಿದ್ದ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿರುವುದು ಇದೀಗ ಖಚಿತವಾಗಿದೆ.

ಇದನ್ನೂ ಓದಿ:Sandalwood; ಮುಂದುವರಿದ ಭಾಗಕ್ಕೆ ಬಿಡುಗಡೆ ಭಾಗ್ಯ: ಸಾಲು ಸಾಲು ಸೀಕ್ವೆಲ್‌

Advertisement

“ನಾನು ಗೌರವಿಸುವ ಇಬ್ಬರು ಕೋಚ್‌ ಗಳಾದ ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಗುರುತಿಸುತ್ತೇನೆ” ಎಂದು ಫ್ಲವರ್ ಆರ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನಾನು ವಿಶೇಷವಾಗಿ ಫಾಫ್ ಡುಪ್ಲೆಸಿಸ್ ಅವರೊಂದಿಗೆ ಮತ್ತೆ ಒಂದಾಗಲು ಉತ್ಸುಕನಾಗಿದ್ದೇನೆ. ನಾವು ಹಿಂದೆ ಚೆನ್ನಾಗಿ ಕೆಲಸ ಮಾಡಿದ್ದೇವೆ, ನಮ್ಮ ಪಾಲುದಾರಿಕೆ ಮತ್ತು ಸಂಬಂಧವನ್ನು ದೊಡ್ಡ ಮತ್ತು ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ.” ಎಂದು ಜಿಂಬಾಬ್ವೆಯ ಮಾಜಿ ಆಟಗಾರ ಹೇಳಿದ್ದಾರೆ.

ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಆ್ಯಂಡಿ ಫ್ಲವರ್ ಈ ಹಿಂದೆ ಸಿಪಿಎಲ್ ಕೂಟದಲ್ಲಿ ಸೈಂಟ್ ಲೂಸಿಯಾ ಕಿಂಗ್ಸ್ ಪರ ಒಟ್ಟಾಗಿ ಕೆಲಸ ಮಾಡಿದ್ದರು.

ಆ್ಯಂಡಿ ಫ್ಲವರ್ ಕಳೆದ ಸೀಸನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. ಅವರ ಎರಡು ವರ್ಷದ ಕಾಂಟ್ರಾಕ್ಟ್ ಮುಗಿದ ಬಳಿಕ ಲಕ್ನೋ ಫ್ರಾಂಚೈಸಿಯು ಜಸ್ಟಿನ್ ಲ್ಯಾಂಗರ್ ಅವರನ್ನು ಕೋಚ್ ಆಗಿ ನೇಮಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next